ಚಿಕ್ಕಜೋಗಿಹಳ್ಳಿ ಬುಧವಾರ ನಡೆದ ನವೋದಯ ವಿದ್ಯಾಲಯ ಸಂಸ್ಥಾಪನಾ ದಿನಾಚರಣೆದಲ್ಲಿ ಪ್ರಾಚಾರ್ಯ ಸುದೇಶ್ ಗೋಪಾಲ್ ಮಲಾಜುರೆ, ಪ್ರಮುಖರಾದ ಸತಿಕಾಂತ್ ಪಧಿ, ಎಂ.ನೀಲಾಕಂಠಚಾರಿ, ನಿವೃತ್ತ ಯೋಧ ಪ್ರಸನ್ನ ಇದ್ದರು. 
ಬಳ್ಳಾರಿ

ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ನವೋದಯ ವಿದ್ಯಾಲಯದ ಚಾರಿತ್ರಿಕ ಹಿನ್ನೆಲೆ
  • ಪ್ರತಿಭಾವಂತ ಮಕ್ಕಳಿಗೆ ವಿಶೇಷ ಪ್ರತಿಭಾ ಪುರಸ್ಕಾರ

ಕಾನಹೊಸಹಳ್ಳಿ: ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವ ಆಶಯದಿಂದ ಪ್ರತಿ ಜಿಲ್ಲೆಗೊಂದು ಕೇಂದ್ರೀಯ ಜವಾಹರ್ ನವೋದಯ ವಿದ್ಯಾಲಯ ಸ್ಥಾಪಿಸಲಾಗಿದೆ ಎಂದು ಪ್ರಾಚಾರ್ಯ ಸುದೇಶ್ ಗೋಪಾಲ್ ಮಲಾಜುರೆ ತಿಳಿಸಿದರು.

ಚಿಕ್ಕಜೋಗಿಹಳ್ಳಿ ಕೇಂದ್ರೀಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಬುಧವಾರ ನವೋದಯ ವಿದ್ಯಾಲಯ ಸಂಸ್ಥಾಪನಾ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾಲಯ ಸ್ಥಾಪನೆಯಾಗಿ 40 ವರ್ಷಗಳಾಗಿದ್ದು, ಇಲ್ಲಿ ಕಲಿತ ಸಾವಿರಾರು ಮಕ್ಕಳು ದೇಶ ಸೇವೆ ಮಾಡುತ್ತಿದ್ದಾರೆ ಎಂದರು.
ಪ್ರಾಧ್ಯಾಪಕ ನೀಲಾಕಂಠಚಾರಿ ಮಾತನಾಡಿ, ಕಲಿಕೆಗೆ ಪೂರಕವಾದ ಅಗತ್ಯ ಸೌಲಭ್ಯಗಳು ಈ ಶಾಲೆಯಲ್ಲಿವೆ. ಇಲ್ಲಿ ಕಲಿತ ನಾವುಗಳು ನಮ್ಮ ಬದುಕು ರೂಪಿಸಿಕೊಳ್ಳಲು ಅಗತ್ಯ ನೆರವನ್ನು ಈ ಸಂಸ್ಥೆ ಕಲ್ಪಿಸಿದೆ ಎಂದರು. ನಂತರ ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯೆ ಉಮಾಸಲ್ಮಾ ಬಳ್ಳಾರಿ, ಹಳೆ ವಿದ್ಯಾರ್ಥಿ ನಿವೃತ್ತ ಯೋಧ ಪ್ರಸನ್ನ ಮಾತನಾಡಿದರು.
ಚಿಕ್ಕಜೋಗಿಹಳ್ಳಿ ಎಸ್‌ಬಿಐ ಶಾಖಾ ವ್ಯವಸ್ಥಾಪಕ ಸತಿಕಾಂತ್ ಪಧಿ, ಚಂದ್ರಕಾಂತ ಇನಾಮದಾರ್, ರಾಮಸ್ವಾಮಿ, ವಾಸುದೇವ ನಾಡಿಗ್, ಶಿವಲೀಲಾ, ಮಹೇಶ್ ಕುಮಾರ್ ಸೇರಿದಂತೆ ವಿದ್ಯಾಲಯದ ಶಿಕ್ಷಕರು ಇದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಂತರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.