ಕೂಡ್ಲಿಗಿಯಲ್ಲಿ ರಾಜ್ಯ ಸರ್ಕಾರದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ಸ್ಥಳವನ್ನು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಅಧಿಕಾರಿಗಳೊಂದಿಗೆ ಶುಕ್ರವಾರ ಪರಿಶೀಲಿಸಿದರು. ಡಿಸಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ಎಸ್ಪಿ ಜಾಹ್ನವಿ, ಸಹಾಯಕ ಆಯುಕ್ತ ವಿವೇಕಾನಂದ, ತಹಸೀಲ್ದಾರ್ ವಿ.ಕೆ. ನೇತ್ರಾವತಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ತಾಪಂ ಇಒ ನರಸಪ್ಪ ಇದ್ದರು. 
ಬಳ್ಳಾರಿ

ಪ್ರಜಾಸೇವೆ ಆಂದೋಲನಕ್ಕೆ ಸಿಎಂ ಚಾಲನೆ

ಕುರುವತ್ತಿ ಶ್ರೀಕಾಂತಪ್ಪ

ಕೂಡ್ಲಿಗಿ: ಹೊಸದಾಗಿ ರಚನೆಯಾಗಿರುವ ಪ್ರಜಾಸೇವಾ ಇಲಾಖೆಯಡಿ ಜನರ ಕುಂದು-ಕೊರತೆ ಪರಿಹರಿಸುವ ಪ್ರಜಾಸೇವೆ ಆಂದೋಲನಕ್ಕೆ ಸೆ.5ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಟ್ಟಣದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ತಿಳಿಸಿದರು.

ಶಾಸಕರ ಜನ ಸಂಪರ್ಕ ಕಚೇರಿ ಬಳಿ ಕಾರ್ಯಕ್ರಮ ನಡೆಸಲು ಸ್ಥಳ ಪರಿಶೀಲಿಸಿ ಶುಕ್ರವಾರ ಮಾತನಾಡಿದರು. ಅಂದು ಸಿಎಂ ಆದಿಯಾಗಿ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ತಾಲೂಕನ್ನು ಬರ ಪೀಡಿತವೆಂದು ಘೋಷಿಸುವ ಸಾಧ್ಯತೆ ಇದೆ ಹೇಳಿದರು.