ಕುರೇಕುಪ್ಪದಲ್ಲಿ ಮೂಲಸೌಕರ್ಯ ಒದಗಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪುರಸಭೆ ಅಧ್ಯಕ್ಷ ಕೆ.ಸೂರ್ಯನಾರಾಯಣ, ಮುಖ್ಯಾಧಿಕಾರಿ ಅರುಣ್ ಕುಮಾರ್‌ಗೆ ಮನವಿ ಸಲ್ಲಿಸಿದರು. ಕಟ್ಟಡ ಕಾರ್ಮಿಕರ ಫೆಡರೇಷನ್ ಜಿಲ್ಲಾ ಸಹ ಸಂಚಾಲಕ ವಿ.ದೇವಣ್ಣ, ಪ್ರಾಂತ ರೈತ ಸಂಘಟನೆ ತಾಲೂಕು ಅಧ್ಯಕ್ಷ ಜಿ.ಪಂಪನಗೌಡ, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಸಂಚಾಲಕ ಸಿ.ಡಿ.ಹಾಲಸ್ವಾಮಿ, ಅಧ್ಯಕ್ಷ ಕುಂಬಾರ ಹಾಲಸ್ವಾಮಿ ಇತರರಿದ್ದರು.  
ಬಳ್ಳಾರಿ

ಕುರೇಕುಪ್ಪಕ್ಕೆ ಮೂಲಸೌಕರ್ಯ ಒದಗಿಸಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಪುರಸಭೆ ಅಧ್ಯಕ್ಷ-ಮುಖ್ಯಾಧಿಕಾರಿಗೆ ಮನವಿ
  • ಸಂಡೂರು ವಿವಿಧ ಸಂಘಟನೆಗಳ ಆಗ್ರಹ
ಸಂಡೂರು: ಕುರೇಕುಪ್ಪದಲ್ಲಿ ಜನಸಂಖ್ಯೆ ತೀವ್ರವಾಗಿ ಬೆಳೆಯುತ್ತಿದ್ದು, ಅಗತ್ಯ ಮೂಲಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪುರಸಭೆ ಅಧ್ಯಕ್ಷ ಕೆ.ಸೂರ್ಯನಾರಾಯಣ ಹಾಗೂ ಮುಖ್ಯಾಧಿಕಾರಿ ಅರುಣ್ ಕುಮಾರ್‌ಗೆ ಮನವಿ ಸಲ್ಲಿಸಿದರು.
ಕಟ್ಟಡ ಕಾರ್ಮಿಕರ ಫೆಡರೇಷನ್ ಜಿಲ್ಲಾ ಸಹ ಸಂಚಾಲಕ ವಿ.ದೇವಣ್ಣ ಮಾತನಾಡಿ, 2015ರಲ್ಲಿ ಕುರೇಕುಪ್ಪ ಗ್ರಾಪಂನಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದರೂ ಪಟ್ಟಣದಲ್ಲಿ ಮೂಲಸೌಕರ್ಯಗಳಿಲ್ಲ. ಕೆಎಂಆರ್‌ಸಿ ಯೋಜನೆಯಡಿ ವಸತಿ ಮತ್ತು ನಿವೇಶನರಹಿತರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು.
ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಒಳ ಚರಂಡಿ ವ್ಯವಸ್ಥೆ, ರೈತರಿಗೆ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗಬೇಕು. ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಪಟ್ಟಣಕ್ಕೆ ಸ್ವಾಗತ ಕಮಾನು ಮಾಡಬೇಕು. ಪ್ರತಿ ತಿಂಗಳು ಸಾರ್ವಜನಿಕರ ಕುಂದು ಕೊರತೆಗಳ ನಿವಾರಣೆ ಬಗ್ಗೆ ಸಭೆ ನಡೆಸಬೇಕು. ಬೇಡಿಕೆ ಈಡೇರದಿದ್ದಲ್ಲಿ ಪುರಸಭೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಪ್ರಾಂತ ರೈತಸಂಘದ ತಾಲೂಕು ಅಧ್ಯಕ್ಷ ಜಿ.ಪಂಪನಗೌಡ, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಸಂಚಾಲಕ ಸಿ.ಡಿ.ಹಾಲಸ್ವಾಮಿ, ಅಧ್ಯಕ್ಷ ಕುಂಬಾರ ಹಾಲಸ್ವಾಮಿ, ಕಾರ್ಯದರ್ಶಿ ಜಗನ್ನಾಥಾಚಾರಿ, ಪ್ರಮುಖರಾದ ಕೆ.ದೇವಣ್ಣ, ಎನ್.ಅಂಬರೀಶ್, ಕೆ.ಸಿದ್ದಪ್ಪ, ಕೆ.ಲೋಕೇಶ್, ಎನ್.ಹುಲಿಯಪ್ಪ, ವಿ.ಜಾನುಪ್ರಕಾಶ್, ಸಿ.ಚಿದಾನಂದ, ಸಿ.ಕೆ.ಹೊನ್ನೂರಪ್ಪ, ಎಚ್.ತಾಯಪ್ಪ, ಎನ್.ಮಲ್ಲಯ್ಯ, ಕೆ.ಅಯ್ಯಪ್ಪ, ಯು.ಅಂಜಿನಪ್ಪ, ಎಚ್.ರಾಮಪ್ಪ, ಗಾದಿಲಿಂಗಪ್ಪ, ಎಚ್.ಪಂಪಣ್ಣ, ಮರಿಯಪ್ಪ, ರಾಮಪ್ಪ, ಕೆ.ಶಿವಗಂಗಮ್ಮ, ಸರಸ್ವತಿ, ಹಂಪಮ್ಮ, ಪದ್ಮಾವತಿ, ಅಂಬಮ್ಮ, ಗಿರಿಜಮ್ಮ, ಗೌರಮ್ಮ, ಶಾಂತಮ್ಮ, ಪಾರ್ವತಮ್ಮ, ಲಕ್ಷ್ಮಿ, ಹುಲಿಗೆಮ್ಮ, ರತ್ನಮ್ಮ, ಅಶ್ವಿನಿ ಇದ್ದರು.