ಕೊಟ್ಟೂರಿನಲ್ಲಿ ತಾಲೂಕು ಸಮಗ್ರ ಅಭಿವೃದ್ಧಿ ವಿವಿಧ ಕಚೇರಿಗಳ ಆರಂಭಕ್ಕೆ ಒತ್ತಾಯಿಸಿ ಸಿಪಿಐ ಹಾಗೂ ವಿವಿಧ ಜನಪರ ಸಂಘಟನೆಗಳು ಕೈಗೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಕೆ.ನೇಮಿರಾಜ್ ನಾಯ್ಕ ಮನವಿ ಸ್ವೀಕರಿಸಿದರು.  
ಬಳ್ಳಾರಿ

ಬೇಡಿಕೆಗಳ ಕುರಿತು ಅಧಿವೇಶನದಲ್ಲಿ ಪ್ರಸ್ತಾಪ: ಶಾಸಕ ಕೆ.ನೇಮಿರಾಜ್ ನಾಯ್ಕ ಭರವಸೆ

ಪ್ರಮುಖ ಮುಖ್ಯಾಂಶಗಳು

  • 17 ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
  • ಸರ್ಕಾರದ ನಿರ್ಲಕ್ಷೃ ಹಾಗೂ ಪ್ರತಿನಿಧಿಗಳ ತಾತ್ಸಾರ ಕಾರಣ
  • ಶಾಸಕರ ಭರವಸೆ ಮೇರೆಗೆ ಧರಣಿ ಅಂತ್ಯ
ಕೊಟ್ಟೂರು: ಪಟ್ಟಣದಲ್ಲಿ ಬಿಇಒ, ಉಪ ನೋಂದಣಿ, ಸಿಡಿಪಿಒ ಕಚೇರಿ ಹಾಗೂ ಸರ್ಕಾರಿ ಪದವಿ ಕಾಲೇಜ್ ಆರಂಭಿಸಲು ಕ್ರಮ ವಹಿಸುವುದಾಗಿ ಶಾಸಕ ಕೆ.ನೇಮಿರಾಜ್ ನಾಯ್ಕ ಭರವಸೆ ನೀಡಿದರು.
ತಾಲೂಕು ಕೇಂದ್ರವಾದ ಪಟ್ಟಣದಲ್ಲಿ ಅಗತ್ಯ ಸರ್ಕಾರಿ ಕಚೇರಿಗಳನ್ನು ಆರಂಭಿಸುವುದು ಸೇರಿದಂತೆ 17 ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ ಹಾಗೂ ವಿವಿಧ ಜನಪರ ಸಂಘಟನೆಗಳು ಕೈಗೊಂಡಿದ್ದ ಅನಿದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಬುಧವಾರ ಮಾತನಾಡಿದರು. ತಾಲೂಕು ಮಟ್ಟದ ಎಲ್ಲ ಕಚೇರಿಗಳನ್ನು ಆರಂಭಿಸಬೇಕೆಂದು ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸುವೆ. ಇತರ ಬೇಡಿಕೆಗಳ ಬಗ್ಗೆಯೂ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ಎಐಡಿಆರ್‌ಎಂ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಕೊಟ್ರಶ್ ಮಾತನಾಡಿ, ಕೊಟ್ಟೂರಿನೊಂದಿಗೆ ತಾಲೂಕು ಕೇಂದ್ರವಾದ ಕುರುಗೋಡಿನಲ್ಲಿ ಬಹುತೇಕ ಕಚೇರಿಗಳು ಆರಂಭಗೊಂಡಿವೆ. ಇದಕ್ಕೆ ಸರ್ಕಾರದ ನಿರ್ಲಕ್ಷೃ ಹಾಗೂ ಪ್ರತಿನಿಧಿಗಳ ತಾತ್ಸಾರ ಕಾರಣ ಎಂದು ದೂರಿದರು. ಶಾಸಕರ ಭರವಸೆ ಮೇರೆಗೆ ಧರಣಿ ಅಂತ್ಯಗೊಳಿಸುವುದಾಗಿ ತಿಳಿಸಿದರು.
ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ ಹರ್ಷವರ್ಧನ್, ಸಿಪಿಐ ತಾಲೂಕು ಕಾರ್ಯದರ್ಶಿ ಕೆ.ರೇಣುಕಮ್ಮ, ಎಐಡಿಆರ್‌ಎಂ ತಾಲೂಕು ಅಧ್ಯಕ್ಷ ತೆಗ್ಗಿನಕೇರಿ ಕೊಟ್ರೇಶ್, ಎಐಟಿಯುಸಿ ಸಂಘಟನೆಯ ಉಮೇಶ, ಹಾಲಮ್ಮ, ಶಂಕ್ರಪ್ಪ ಇತರರಿದ್ದರು.