ಕಂಪ್ಲಿ ಪ್ರಜಾಸೌಧ ಬಳಿ ಮೌಲಾನಾ ಆಜಾದ್ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಭಾನುವಾರ ಭೂಮಿಪೂಜೆ ನೆರವೇರಿಸಿದರು. ಪ್ರಮುಖರಾದ ಸೈಯ್ಯದ್ ಷಾಹ್ ಅಬುಲ್‌ಹಸನ್‌ಖಾದ್ರಿ, ಸೈಯ್ಯದ್ ಷಾಹ್ ಡಾ.ನೂರ್‌ಅಹ್ಮದ್‌ಖಾದ್ರಿ, ಸೈಯ್ಯದ್ ಷಾಹ್ ಖರೀಮುಲ್ಲಾಖಾದ್ರಿ, ಕೆ.ಶ್ರೀನಿವಾಸರಾವ್, ಹಬೀಬ್‌ರೆಹಮಾನ್ ಇತರರಿದ್ದರು.
- ಶಾಸಕ ಜೆ.ಎನ್.ಗಣೇಶ ಹೇಳಿಕೆ
- ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ
ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಕೇವಲ ವೋಟ್‌ಬ್ಯಾಂಕ್ ಮಾಡಿಕೊಂಡಿಲ್ಲ. ಕ್ಷೇತ್ರದ ಮುಸ್ಲಿಮರ ಅಭಿವೃದ್ಧಿಗಾಗಿ 70ಕೋಟಿ ರೂ.ಗೂ ಹೆಚ್ಚಿನ ಅನುದಾನ ಒದಗಿಸಿದೆ ಎಂದು ಶಾಸಕ ಜೆ.ಎನ್.ಗಣೇಶ ತಿಳಿಸಿದರು.
ಪ್ರಜಾಸೌಧ ಬಳಿ ಅಲ್ಪಸಂಖ್ಯಾತರ ಕಲ್ಯಾಣ ಯೋಜನಡಿ 4.27 ಕೋಟಿ ರೂ. ವೆಚ್ಚದ ಮೌಲಾನಾ ಆಜಾದ್ ಶಾಲಾ ಕಟ್ಟಡ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಶಾದಿಮಹಲ್, ಖಬರ್‌ಸ್ತಾನ್‌ಗಳನ್ನು ಅಭಿವೃದ್ಧಿ ಗೊಳಿಸಲಾಗಿದೆ. ಎಚ್.ವೀರಾಪುರದಲ್ಲಿ 25ಕೋಟಿ ರೂ. ವೆಚ್ಚದಲ್ಲಿ ಸಂತ ಶಿಶುನಾಳ ಶರೀಫರ ಶಾಲಾ ಕಟ್ಟಡ ನಿರ್ಮಾಣಗೊಳಿಸಲಾಗುವುದು. ಕಾಲುವೆಗಳಿಗೆ ಜಂಟಿ ನೀರು ಹರಿಸುವಂತೆ ಸಿಎಂ, ನೀರಾವರಿ ಸಚಿವರೊಂದಿಗೆ ಸಮಾಲೋಚಿಸಿದ್ದೇನೆ ಎಂದರು.
ಕೆಕೆಆರ್‌ಡಿಬಿಯ ಮ್ಯಾಕ್ರೋ ಯೋಜನೆಯ 3ಕೋಟಿ ರೂ.ಗಳ ಪ್ರಜಾಸೌಧಕ್ಕೆ ಆವರಣಗೋಡೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಮುಸ್ಲಿಂ ಧಮರ್ಮಗುರುಗಳಾದ ಸೈಯ್ಯದ್ ಷಾಹ್ ಅಬುಲ್‌ಹಸನ್‌ಖಾದ್ರಿ, ಸೈಯ್ಯದ್ ಷಾಹ್ ಡಾ.ನೂರ್‌ಅಹ್ಮದ್‌ಖಾದ್ರಿ, ಸೈಯ್ಯದ್ ಷಾಹ್ ಖರೀಮುಲ್ಲಾಖಾದ್ರಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಹಬೀಬ್‌ರೆಹಮಾನ್, ಪ್ರಮುಖರಾದ ಕೆ.ಮಸ್ತಾನ್‌ವಲಿ, ಕೆ.ಎಸ್.ಚಾಂದ್‌ಬಾಷಾ, ಎ.ಸಿ.ದಾನಪ್ಪ, ಬಿ.ನಾರಾಯಣಪ್ಪ, ಕರಿಬಸವನಗೌಡ, ಬಿ.ಸಿದ್ದಪ್ಪ, ಡಿ.ಮೌನೇಶ್ ಇದ್ದರು.