ಸಿರಿಗೇರಿ ಜನತಾ ಕಾಲನಿಯಲ್ಲಿ ಸಹಿಪ್ರಾ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಎಂ.ನಾಗರಾಜ ಭೂಮಿ ಪೂಜೆ ನೆರವೇರಿಸಿದರು. ಪ್ರಮುಖರಾದ ಸಿ.ಎಂ.ನಾಗರಾಜ ಸ್ವಾಮಿ, ಬಿ.ಸೋಮಶೇಖರಪ್ಪ, ಬಿ.ನಾಗೇಂದ್ರ, ಎಸ್.ಎಂ.ನಾಗರಾಜ ಸ್ವಾಮಿ, ರೇಣುಕಪ್ಪ, ಜಲಾಲಿ ಪೀರ, ಎಸ್‌ಡಿಎಂಸಿ ಅಧ್ಯಕ್ಷ ರಾಮಲಿಂಗ ಇತರರಿದ್ದರು. 
ಬಳ್ಳಾರಿ

ಶಿಕ್ಷಣಕ್ಕೆ ಆದ್ಯತೆ ನೀಡಿ

ಶಾಮಸುಂದರ್ ಕೊಪ್ಪಳಕರ್
ಸಿರಿಗೇರಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯುತ್ ರಾಜ್ ಇಲಾಖೆ, ಕೆಕೆಆರ್‌ಡಿಬಿಯ 14.50 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಜನತಾ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಹುಚ್ಚೇಶ್ವರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಲಾ ಒಂದು ಕೊಠಡಿ ನಿರ್ಮಾಣಕ್ಕೆ ಶಾಸಕ ಬಿ.ಎಂ.ನಾಗರಾಜ ಬುಧವಾರ ಭೂಮಿಪೂಜೆ ಮಾಡಿದರು.
ನಂತರ ಮಾತನಾಡಿ, ಯಾವುದೇ ಕಾರಣಕ್ಕೂ ಮಕ್ಕಳನ್ನು ಶಾಲೆಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕು. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು. ಮುಖ್ಯಶಿಕ್ಷಕರಾದ ಬಿ.ಆರ್.ಶಿವಕುಮಾರ್, ಟಿ.ಎಚ್.ಶೆಕ್ಷಾವಲಿ, ಜೆಇ ಕಾಂತರಾಜ, ಪ್ರಮುಖರಾದ ರವಿಕುಮಾರ, ಗಣೇಶ ಮಚ್ಚಿ, ನಾಗರಾಜ, ಬಿ.ಉಮೇಶ, ಅನ್ವರ್ ಬಾಷಾ, ಬಿ.ರಮೇಶ, ರಾರವಿ ವೆಂಕಟೇಶ, ಗರ್ಜಿಲಿಂಗಪ್ಪ ಇತರರಿದ್ದರು.