ಕಂಪ್ಲಿಯಲ್ಲಿ ನಡೆದ ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ತಹಸೀಲ್ದಾರ್ ಜೂಗಲ ಮಂಜುನಾಥ, ಅಧಿಕಾರಿಗಳಾದ ಆರ್.ಕೆ. ಶ್ರೀಕುಮಾರ್, ಬಿ. ರವೀಂದ್ರಕುಮಾರ್, ಎಎಸ್‌ಐ ಬಸವರಾಜ ಇತರರನ್ನು ಗೌರವಿಸಲಾಯಿತು.
ಕಂಪ್ಲಿ: ಅಂಬೇಡ್ಕರ್ ತತ್ವ ಸಿದ್ಧಾಂತಗಳು ಭವ್ಯ ಭಾರತದ ನಿರ್ಮಾಣಕ್ಕೆ ಆಧಾರವಾಗಿವೆ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ತಾಪಂ ಸಹಯೋಗದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಅಂಬೇಡ್ಕರ್ ಅವರ ಅಗಾಧ ಜ್ಞಾನ, ಅಧ್ಯಯನ, ಪರಿಶ್ರಮ ಹಾಗೂ ಅರ್ಪಣೆ ಮನೋಭಾವನೆಗಳು ಸದಾ ಆದರ್ಶವಾಗಿವೆ. ಯುವಜನತೆ ಅಂಬೇಡ್ಕರ್ ಅವರನ್ನು ಆದರ್ಶವಾಗಿ ಪರಿಗಣಿಸಿದಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯ ಎಂದರು.
ಪಾಠಶಾಲೆಯಿಂದ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಸಾಗಿ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಾಗ ಕರ್ನಾಟಕ ರಾಜ್ಯ ಅಸ್ಪಶ್ಯರ ವಿಮೋಚನಾ ಸಮಿತಿಯಿಂದ ಅಧಿಕಾರಿ ಹಾಗೂ ಗಣ್ಯರನ್ನು ಗೌರವಿಸಲಾಯಿತು.
ತಾಪಂ ಇಒ ಆರ್.ಕೆ. ಶ್ರೀಕುಮಾರ್, ನಿಲಯಪಾಲಕ ಕೆ. ವಿರೂಪಾಕ್ಷಿ, ಪ್ರಮುಖರಾದ ಕೆ. ಲಕ್ಷ್ಮಣ, ಎ.ಸಿ. ದಾನಪ್ಪ, ಜಿ. ರಾಮಣ್ಣ, ಎನ್. ಬುಜ್ಜಿಕುಮಾರ್, ಬಲಕುಂದಿ ಮಲ್ಲಿಕಾರ್ಜುನ, ತಳಕಲ್ ಈರಣ್ಣ, ಡಿ. ಬಸವರಾಜ, ಸಿ.ಎ. ಚನ್ನಪ್ಪ, ಸಿ. ವೆಂಕಟೇಶ, ಡಿ. ನಾಗೇಂದ್ರ, ವಸಂತರಾಜ ಕಹಳೆ, ಟಿ. ಶಿವಪ್ಪ, ಮೆಟ್ರಿ ಬಸವರಾಜ, ರಾಮಸಾಗರ ಬಸವರಾಜ, ಮುದ್ದಾಪುರ ಯಲ್ಲಪ್ಪ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ದಲಿತಪರ ಸಂಘಟನೆಗಳ ಪದಾಧಿಕಾರಿಗಳಿದ್ದರು.
ಎಂ.ಡಿ. ಕ್ಯಾಂಪಿನಲ್ಲಿ ಜೈಭೀಮ್ ಯುವಕ ಸಂಘದಿಂದ ಮಕ್ಕಳಿಗೆ 100 ಶಾಲೆ ಬ್ಯಾಗ್ ಹಾಗೂ ನೋಟ್ ಬುಕ್ ವಿತರಿಸಲಾಯಿತು. ಸಂಘದ ಅಧ್ಯಕ್ಷ ಎನ್. ಗಂಗಣ್ಣ, ಎಸ್‌ಡಿಎಂಸಿ ಅಧ್ಯಕ್ಷ ಕಾಳಿಂಗ, ಎಸ್. ಬಾನಿ, ಏಸು, ಶೇಖರ್, ಯಲ್ಲಪ್ಪ, ಬಿ.ಕೆ. ವಿರೂಪಾಕ್ಷಿ, ಪಿ. ಬ್ರಹ್ಮಯ್ಯ, ಕೆ.ಎಸ್. ಚಾಂದ್ ಬಾಷ, ಜಿ. ರಾಮಣ್ಣ, ಅಕ್ಕಿ ಜಿಲಾನ, ವೀರಾಂಜನೇಯಲು ಇತರರಿದ್ದರು.
ನಂ.10 ಮುದ್ದಾಪುರ ಅಂಬೇಡ್ಕರ್ ಕಾಲನಿಯಲ್ಲಿ ದಲಿತ ಸಂಘರ್ಷ ಸಮಿತಿ (ಮಾನಯ್ಯ ಬಣ)ಯಿಂದ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಗ್ರಾಮ ಅಧ್ಯಕ್ಷ ಜೆ. ಉಮೇಶ್, ಕಜ್ಜಿ ಸ್ವಾಮಿ, ಬಸಪ್ಪ ಮೆಟ್ರಿ, ಬಸವರಾಜ ಮಾಳ್ಗಿ, ಕೃಷ್ಣ, ವೀರೇಶ, ರುದ್ರಪ್ಪ, ರೇಣುಕರಾಜ ಸೇರಿದಂತೆ ಇತರರಿದ್ದರು.