ಸಿಂಧನೂರು ಭಗತ್‌ಸಿಂಗ್ ಆಟೋ ಚಾಲಕರ ಸಂಘ ಬುಧವಾರ ಸೌಧೆ ಒಲೆಯಲ್ಲಿ ಚಹಾ ತಯಾರಿಸಿ ಪ್ರತಿಭಟನೆ ಪ್ರತಿಭಟಿಸಿತು. ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್,ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ, ಸಿಪಿಐ(ಎಂಎಲ್) ಲಿಬರೇಷನ್ ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಶೇಕ್ಷಾವಲಿ ಇತರರಿದ್ದರು. 
ಬಳ್ಳಾರಿ

ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ

ಪ್ರಮುಖ ಮುಖ್ಯಾಂಶಗಳು

  • ಪೆಟ್ರೋಲ್,
  • ಡೀಸೆಲ್,
  • ಸಿಎನ್‌ಜಿ
ಎಐಸಿಸಿಟಿಯುನಿಂದ ಪ್ರತಿಭಟನೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳಕ್ಕೆ ಆಕ್ರೋಶ
ಸಿಂಧನೂರು: ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮೇಲಿಂದ ಮೇಲೆ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಭಗತ್‌ಸಿಂಗ್ ಆಟೋ ಚಾಲಕರ ಸಂಘ ಹಾಗೂ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ದಿಂದ ನಗರದ ಗಾಂಧಿ ಸರ್ಕಲ್‌ನಲ್ಲಿ ಸೌಧೆ ಒಲೆಯಲ್ಲಿ ಚಹಾ ತಯಾರಿಸಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರ ಮೇ 15 ರಿಂದ ಮೇ 25ರ ಒಳಗೆ ಕೇವಲ 11ದಿನಗಳಲ್ಲಿ ಪೆಟ್ರೋಲ್ 7.38 ರೂ. ಹಾಗೂ ಡೀಸೆಲ್ 7.52 ರೂ. ಹಾಗೂ ಸಿಎನ್‌ಜಿ 6ರೂ. ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 3,113 ರೂಪಾಯಿಗೆ ಏರಿಕೆ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 92ರಿಂದ 96 ಆಸುಪಾಸಿನಲ್ಲಿದ್ದರೂ ಪೆಟ್ರೋಲ್ ಶೇ 42.8 ಮತ್ತು ಡೀಸೆಲ್ ಶೇ 67.9ಕ್ಕೂ ಹೆಚ್ಚು ಏರಿಕೆ ಮಾಡಲಾಗಿದೆ. ಇಂಧನ ಬೆಲೆ ಏರಿಕೆಯು ಸಾರಿಗೆ ಸಂಪರ್ಕದಿಂದ ಹಿಡಿದು ಆಹಾರ ಪದಾರ್ಥಗಳವರೆಗೆ ಪ್ರತಿಯೊಂದು ವಲಯದ ಮೇಲೂ ಪ್ರಭಾವ ಬೀರಿದ್ದು, ಮೋದಿ ಸರ್ಕಾರವು ಸಾಮಾನ್ಯ ಜನರು ಸೇರಿದಂತೆ ಎಲ್ಲ ದುಡಿಯುವ ಜನರ ಬೆನ್ನೆಲುಬನ್ನು ಮುರಿದಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಹಾಗೂ ಅಡುಗೆ ಅನಿಲ ಬೆಲೆಯನ್ನು ಕೂಡಲೇ ಇಳಿಕೆ ಮಾಡಬೇಕು. ಜೀವನಾವಶ್ಯಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಕೂಡಲೇ ನಿಯಂತ್ರಣಕ್ಕೆ ತರಬೇಕು. ಪೆಟ್ರೋಲ್-ಡೀಸೆಲ್ ಇಂಧನದ ಬೆಲೆಯನ್ನು ಮುಕ್ತ ಮಾರುಕಟ್ಟೆಗೆ ಬಿಡದೇ ಕೇಂದ್ರ ಸರಕಾರವೇ ನಿರ್ಧರಿಸಿ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.
ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್, ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ, ಸಿಪಿಐ(ಎಂಎಲ್) ಲಿಬರೇಷನ್ ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಶೇಕ್ಷಾವಲಿ, ಖಾಜಾಹುಸೇನ್, ಶೌಕತ್, ಅಕ್ಬರ್, ಹುಸೇನ್‌ಬಾಷಾ, ಸಲೀಮ್, ಮಹ್ಮದ್ ರಫಿ, ಹುಸೇನ್‌ಸಾಬ್, ರಾಜ, ಪಂಪಾಪತಿ, ಮಹ್ಮದ್ ರಫಿ, ರಾಜಶೇಖರ್, ದುರುಗಪ್ಪ, ಮಹ್ಮದ್ ರಫಿ, ಅಲಿಬಾಬಾ, ಅಂಬರೀಷ, ಮಹೆಬೂಬ್, ರಾಘವೇಂದ್ರ ಉಪ್ಪಳ, ಮಹಾದೇವ ಅಮರಾಪುರ ಇತರರಿದ್ದರು.