ಕಂಪ್ಲಿ ಉತ್ಸವ ಆಯೋಜನೆಗಾಗಿ ಪಟ್ಟಣದಲ್ಲಿರುವ ಸಕ್ಕರೆ ಕಾರ್ಖಾನೆ ಜಮೀನನ್ನು ಸಮತಟ್ಟುಗೊಳಿಸುವ ಕಾರ್ಯ ನಡೆಯಿತು.
ಕಂಪ್ಲಿ: ಪಟ್ಟಣದಲ್ಲಿ ಕಂಪ್ಲಿ ಉತ್ಸವ ಆಯೋಜನೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಸಿದ್ಧತೆ ಆರಂಭಗೊಂಡಿದೆ.
ಸುಂದರಿ ಶುಗರ್ಸ್ ಕಾರ್ಖಾನೆ ಆವರಣದಲ್ಲಿರುವ ಆಂಜನೇಯ ದೇವಸ್ಥಾನ ಮುಂಭಾಗದ ಮೈದಾನದಲ್ಲಿ ಫೆ.11 ಮತ್ತು 12ರಂದು ಕಂಪ್ಲಿ ಉತ್ಸವ ಆಯೋಜನೆಗೆ ಉದ್ದೇಶಿಸಲಾಗಿದೆ. ಮಂಗಳವಾರ ಜಮೀನು ಸ್ವಚ್ಛತೆ ಕಾರ್ಯ ನಡೆಯಿತು. ಬೇಲಿ, ಗಿಡಗಳನ್ನು ಜೆಸಿಬಿಯಿಂದ ತೆರವುಗೊಳಿಸಿ ಸಮತಟ್ಟುಗೊಳಿಸಲಾಯಿತು.
ಪುರಸಭೆ ಜೆಇ ಪಿ.ತೇಜಸ್ವಿನಿ, ಆರೋಗ್ಯ ನಿರೀಕ್ಷಕ ಪ್ರಕಾಶ್‌ಬಾಬು, ಪ್ರಮುಖರಾದ ಸಿ.ಆರ್.ಹನುಮಂತ, ಬಿ.ಸಿದ್ದಪ್ಪ, ಕೆ.ಷಣ್ಮುಖಪ್ಪ ಇತರರಿದ್ದರು. ತೋರಣಗಲ್ಲು ಡಿವೈಎಸ್ಪಿ ಪ್ರಸಾದ್ ಗೋಖಲೆ, ತಹಸೀಲ್ದಾರ್ ಜೂಗಲ ಮಂಜುನಾಯಕ, ಪಿಐ ಕೆ.ಬಿ.ವಾಸುಕುಮಾರ್, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಸೋಮವಾರ ಸ್ಥಳ ಪರಿಶೀಲಿಸಿದರು.