ಹಗರಿಬೊಮ್ಮನಹಳ್ಳಿಯಲ್ಲಿ ವೀರಶೈವ ಪಂಚಮಸಾಲಿ ಸಮುದಾಯದಿಂದ ಭಾನುವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಬಳಿಕ ಪುತ್ಥಳಿಯ ಮಾದರಿ ಪ್ರತಿಯನ್ನು ಬಿಡುಗಡೆ ಮಾಡಲಾಯಿತು. ಶಾಸಕ ಕೆ. ನೇಮಿರಾಜ್ ನಾಯ್ಕ, ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ್ರು, ಹಿರಿಯರಾದ ಬಾವಿ ಬೆಟ್ಟಪ್ಪ, ಬದಾಮಿ ಮೃತ್ಯುಂಜಯ, ವೈ. ಮಲ್ಲಿಕಾರ್ಜುನ, ಎಚ್.ಕೆ. ಕೊಟ್ರೇಶ, ಕೊಟ್ರೇಶ ಶೆಟ್ಟರ್ ಮತ್ತಿತರರು ಇದ್ದರು.
- ಚನ್ನಮ್ಮ ಪುತ್ಥಳಿ ಪೂರ್ವಭಾವಿ ಸಭೆ
- 65 ಲಕ್ಷ ರೂ. ವೆಚ್ಚದಲ್ಲಿ ಪ್ರತಿಷ್ಠಾಪನೆ
ಪಟ್ಟಣದ ಹಳೇ ಊರಿನ ಹರಿಹರ-ಹೊಸಪೇಟೆ-ತಂಬ್ರಹಳ್ಳಿ ಕೂಡು ರಸ್ತೆಯಲ್ಲಿ 65 ಲಕ್ಷ ರೂ.ಗಳ ವೆಚ್ಚದಲ್ಲಿ ಪಂಚಮಸಾಲಿ ಸಮುದಾಯದ ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ನಿರ್ಮಾಣದ ವಿಷಯವಾಗಿ ಮುಖಂಡರಿಂದ ಭಾನುವಾರ ಪೂರ್ವಭಾವಿ ಸಭೆ ನಡೆಯಿತು.
ಶಾಸಕ ಕೆ. ನೇಮಿರಾಜ್ ನಾಯ್ಕ ಮಾತನಾಡಿ, 23ರಂದು ಭೂಮಿಪೂಜೆ ನಡೆಯಲಿದ್ದು, ಕಾರ್ಯಕ್ರಮದ ರೂಪರೇಷೆಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದರು. ಪಟ್ಟಣದಲ್ಲಿ ವೀರಶೈವ ರುದ್ರಭೂಮಿಯ ಅಭಿವೃದ್ಧಿ ಕುರಿತು ಸಮಾಜದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ಸಕ್ರಿಹಳ್ಳಿ ಕೊಟ್ರೇಶ, ಎಚ್.ಎ. ಕೊಟ್ರೇಶ, ಬಂಡಿಹಳ್ಳಿ ಮಂಜುನಾಥ, ವಕೀಲರಾದ ಕೊಟ್ರೇಶ ಶೆಟ್ಟರ್, ಅಕ್ಕಿ ಮಲ್ಲಿಕಾರ್ಜುನ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ ಪ್ರಸ್ತಾಪಿಸಿದರು. ಕಾಯ್ದಿರಿಸಿದ ಪಂಚಮಸಾಲಿ ನಿವೇಶನದ ಅಭಿವೃದ್ಧಿಗೆ ಅನುದಾನದ ಬೇಡಿಕೆಯಿಟ್ಟರು. ಇದಕ್ಕೆ ಉತ್ತರಿಸಿದ ಶಾಸಕ, ಅಭಿವೃದ್ಧಿಗೆ ಅಗತ್ಯ ಕ್ರಮ, ಖಾಲಿ ನಿವೇಶನಕ್ಕೆ ಅನುದಾನ ನೀಡುವ ಭರವಸೆ ನೀಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮೃತ್ಯುಂಜಯ ಬದಾಮಿ ಮಾತನಾಡಿ, ಚಪ್ಪರದಳ್ಳಿಯಲ್ಲಿ ಪಂಚಮಸಾಲಿ ಸಮುದಾಯ ಭವನ ಕೂಡ ಆರಂಭವಾಗಲಿದೆ ಎಂದರು.
ಸಮಾಜದ ತಾಲೂಕು ಅಧ್ಯಕ್ಷ ಬಿ. ಮಂಜುನಾಥಗೌಡ್ರು, ನಿವೃತ್ತ ಶಿಕ್ಷಕರಾದ ಶಂಭುಲಿಂಗಪ್ಪ, ಕೊಟ್ರಗೌಡ್ರು, ಉತ್ತಂಗಿ ರವಿ, ಬಾವಿ ರವೀಂದ್ರ, ಶಿಕ್ಷಕರಾದ ಇಟ್ಟಿಗಿ ಮಂಜುನಾಥ, ಎಂ.ಜಿ. ರವಿ, ಇಟ್ಟಿಗಿ ಪ್ರಭಾಕರ, ಪುರಸಭೆ ಸದಸ್ಯ ರಾಜೇಶ ಬ್ಯಾಡ್ಗಿ, ಬಿಜೆಪಿ ತಾಲೂಕು ಅಧ್ಯಕ್ಷ ಬೆಣಕಲ್ಲು ಪ್ರಕಾಶ ಹಾಗೂ ಪ್ರಮುಖರಾದ ಎಸ್.ವಿ. ಪಾಟೀಲ್, ಕಿನ್ನಾಳ್ ಸುಭಾಷ್, ನಟರಾಜ ಬದಾಮಿ, ಕಡ್ಡಿ ಚನ್ನಪ್ಪ, ಚಿತ್ತವಾಡ್ಗಿ ಪ್ರಕಾಶ, ರುದ್ರೇಶ, ಐ.ಟಿ. ಕೊಟ್ರೇಶ, ಕೃಷ್ಣಮೂರ್ತಿ ಶೆಟ್ರು, ಹೋಟಲ್ ಸಿದ್ದರಾಜು, ಡಿಶ್ ಪಾಂಡುನಾಯ್ಕ, ಗುರುಬಸವರಾಜ, ಜೆಸ್ಕಾಂ ವಿರೂಪಾಕ್ಷಪ್ಪ, ಗುರುರಾಜ್, ದಿವಾಕರಗೌಡ, ವಟಮ್ಮನಹಳ್ಳಿ ಕೊಟ್ರೇಶ, ಕಡಲಬಾಳು ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.