ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ ಪೋಸ್ಟರ್ ಪ್ರದರ್ಶನವನ್ನು ಎನ್ವಿಸಿಸ್ ಟೆಕ್ನಾಲಾಜೀಸ್ ಪ್ರೈವೆಟ್ ಲಿ. ನಿರ್ದೇಶಕ ಡಾ. ಅನಿಲ್ ಕುಮಾರ್ ಕೊಟ್ಟಾನಿ ವೀಕ್ಷಿಸಿದರು. ವಿದ್ಯಾರ್ಥಿಗಳಿದ್ದರು 
ಬಳ್ಳಾರಿ

ವಿಎಸ್‌ಕೆ ವಿವಿಯಲ್ಲಿ ಪೋಸ್ಟರ್ ಪ್ರದರ್ಶನ

ಪ್ರಮುಖ ಮುಖ್ಯಾಂಶಗಳು

  • ಪ್ರದರ್ಶನ
ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ನಿರ್ವಹಣಾ ಶಾಸ್ತ್ರ ವಿಭಾಗದಿಂದಆಯೋಜಿಸಿದ್ದ ಪೋಸ್ಟರ್ ಪ್ರದರ್ಶನವಾದ ಹೌಸ್‌ಪುಲ್ ಕಾರ್ಯಕ್ರಮವನ್ನು ಎನ್ವಿಸಿಸ್ ಟೆಕ್ನಾಲಾಜೀಸ್ ಪ್ರೈವೆಟ್ ಲಿ. ನಿರ್ದೇಶಕ ಡಾ. ಅನಿಲ್ ಕುಮಾರ್ ಕೊಟ್ಟಾನಿ ಉದ್ಘಾಟಿಸಿದರು. ಪ್ರದರ್ಶನದಲ್ಲಿ ಕಾರ್ಪೋರೇಟ್ ಕ್ಷೇತ್ರದಲ್ಲಿನ ನಾನಾ ಅಯಾಮಗಳಾದ ಎಸ್‌ಸಿಎಂ, ನಾವೀನ್ಯತೆ ಮತ್ತು ಸೃಜನಶೀಲತೆ, ಎಐ ಮತ್ತು ವ್ಯಾಪಾರ, ಫಿನ್‌ಟೆಕ್, ಸಾರ್ಟ್‌ಆ್ಯಪ್‌ಗಳು ಹಾಗೂ ಉದ್ಯಮಕ್ಕೆ ಸೇರಿದಂತೆ 500ಕ್ಕೂ ಹೆಚ್ಚು ಪೋಸ್ಟರ್‌ಗಳನು ಪ್ರದರ್ಶಿಸಲಾಯಿತು. ಜಿಲ್ಲೆಯ ಬಿಬಿಎ, ಬಿಸಿಎ, ಹಾಗೂ ವಾಣಿಜ್ಯಶಾಸ್ತ್ರ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಪೋಸ್ಟರ್ ಪ್ರದರ್ಶನದಲ್ಲಿ ಭಾಗವಹಿಸಿದ್ದರು.