ಕಾನಹೊಸಹಳ್ಳಿ ಸಮೀಪದ ಹುಲಿಕುಂಟೆ ಗ್ರಾಮದಲ್ಲಿ ಯಂಗ್ ಕ್ರಿಕೆಟರ್ಸ್ ಬಳಗದಿಂದ ಆಯೋಜಿಸಿದ್ದ ಕ್ರಿಕೆಟ್ ಟೂರ್ನಾಮೆಂಟ್‌ಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿದರು. ತಾಪಂ ಮಾಜಿ ಸದಸ್ಯ ಎನ್.ಪಿ.ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಮೂರ್ತಿ, ಮಾಜಿ ಸದಸ್ಯೆ ಇಂದ್ರಮ್ಮ ಮಲಿಯಪ್ಪ ಇತರರಿದ್ದರು.
- ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸಲಹೆ
- ಕ್ರಿಕೆಟ್ ಟೂರ್ನಾಮೆಂಟ್
ಕಾನಹೊಸಹಳ್ಳಿ: ಕ್ರೀಡೆಗಳು ಆರೋಗ್ಯದೊಂದಿಗೆ ಬೌದ್ಧಿಕ ಶಕ್ತಿ, ಮಾನಸಿಕ ಸ್ಥೈರ್ಯ, ಶಿಸ್ತು ಹಾಗೂ ನಾಯಕತ್ವ ಗುಣ ಬೆಳೆಸುತ್ತವೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಹುಲಿಕುಂಟೆ ಗ್ರಾಮದಲ್ಲಿ ಯಂಗ್ ಕ್ರಿಕೆಟರ್ಸ್ ಬಳಗದಿಂದ ಶನಿವಾರ ಆಯೋಜಿಸಿದ್ದ ಕ್ರಿಕೆಟ್ ಟೂರ್ನಾಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದರು. ಸೋಲು ಗೆಲುವಿನ ಸೋಪಾನ. ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಮುನ್ನಡೆಯಬೇಕು. ದೇಸಿ ಆಟಗಳಿಗೂ ಒತ್ತು ನೀಡಿದರೆ ನಾಡಿನ ಸೊಗಡನ್ನು ಉಳಿಸಿ ಬೆಳೆಸಿದಂತಾಗುತ್ತದೆ ಎಂದರು.
ಗ್ರಾಪಂ ಮಾಜಿ ಸದಸ್ಯ ಕೆ.ನಾಗರಾಜ್ ಮಾತನಾಡಿ, ನಮ್ಮೂರಿನ ಯುವಕರಿಗೆ ಕ್ರೀಡೆಯಲ್ಲಿ ತೊಡಗಲು ಹೆಚ್ಚು ಆಸಕ್ತಿ ಇದೆ. ಆದರೆ, ಆರ್ಥಿಕ ಸಂಕಷ್ಟ ಮುನ್ನಡೆಯಲು ಬಿಡುತ್ತಿಲ್ಲ. ಗ್ರಾಮದಲ್ಲಿ ಉತ್ತಮ ಮೈದಾನದ ಅವಶ್ಯ ಇದೆ ಎಂದು ತಿಳಿಸಿದರು.
ತಾಪಂ ಮಾಜಿ ಸದಸ್ಯ ಎನ್.ಪಿ.ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಮೂರ್ತಿ, ಮಾಜಿ ಸದಸ್ಯೆ ಇಂದ್ರಮ್ಮ ಮಲಿಯಪ್ಪ, ತಾಲೂಕು ಬಿಜೆಪಿ ಒಬಿಸಿ ಯುವ ಮೋರ್ಚಾ ಅಧ್ಯಕ್ಷ ಜಿ.ಎಸ್.ವಂಸಂತಗೌಡ್ರು, ಮೊಳಕಾಲ್ಮೂರು ಬಿಜೆಪಿ ಎಸ್ಸಿ ಘಟಕದ ದೇವಸಮುದ್ರ ಚಂದ್ರು, ಪ್ರಮುಖರಾದ ಹುಲಿಕುಂಟೆ ಗುರುಮೂರ್ತಿ, ಸೂಲದಹಳ್ಳಿ ರಾಮಣ್ಣ, ಕಾಟ್ರಳ್ಳಿ ತಿಪ್ಪೇಶ್, ರಾಜಣ್ಣ, ಅಂಜಿನಪ್ಪ ಇತರರಿದ್ದರು.