ಹೂವಿನಹಡಗಲಿಯ ಯಮನೂರು ಸ್ವಾಮಿ ದರ್ಗಾದ ಆವರಣದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ.ಪರಮೇಶ್ವರ ನಾಯ್ಕ ಉದ್ಘಾಟಿಸಿದರು. ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಬಾವಿಹಳ್ಳಿ ಸದ್ದಾಂ ಹುಸೇನ್, ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಮೊಹಮ್ಮದ್ ಸುಫಿಯಾನ್ ಸಖಾಫಿ ಇತರರಿದ್ದರು. 
ಬಳ್ಳಾರಿ

ಸಮಾಜಕ್ಕೆ ದಾರ್ಶನಿಕರ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಉಪಾಧ್ಯಕ್ಷ ಪಿ.ಟಿ.ಪರಮೇಶ್ವರ ನಾಯ್ಕ ಅನಿಸಿಕೆ
  • ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ಹೂವಿನಹಡಗಲಿ: ವಿಶ್ವದಲ್ಲಿ ಎಲ್ಲ ಧರ್ಮಗಳ ಗುರುಗಳು ಹಾಗೂ ಸಂತ ಶರಣರು ಸಹಬಾಳ್ವೆಯಿಂದ ಬದುಕುವುದನ್ನು ಕಲಿಸಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು.

ಯಮನೂರು ಸ್ವಾಮಿ ದರ್ಗಾದ ಆವರಣದಲ್ಲಿ ಈದ್ ಮಿಲಾದ್ ಕಮಿಟಿಯಿಂದ ಮುಹಮದ್ ಪೈಗಂಬರ್ 1501ನೇ ಜನ್ಮ ದಿದ ನಿಮಿತ್ತ ಗುರುವಾರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವ ಗುರು ಬಸವಣ್ಣ, ಬುದ್ಧ, ಮಹಾವೀರ, ಏಸುಕ್ರಿಸ್ತ, ಮುಹಮದ್ ಪೈಗಂಬರ್ ಸೇರಿ ನೇಕ ದಾರ್ಶನಿಕರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಅವರೆಲ್ಲರೂ ಶಾಂತಿ, ಸಹಬಾಳ್ವೆ ಸಾರಿದ್ದಾರೆ. ಮುಸ್ಲಿಂ ಸಮಾಜದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಅತಿ ಕಡಿಮೆ. ಯುವಕರು ಈದ್ ಮಿಲಾದ್ ಕಮಿಟಿ ರಚಿಸಿ 2 ವರ್ಷದಿಂದ ಸಾಮೂಹಿಕ ವಿವಾಹ ನಡೆಸುತ್ತಿರುವುದು ಶ್ಲಾಘನೀಯ ಎಂದರು. 11 ಜೋಡಿಗಳು ನೂತನ ಜೀವನ ಪ್ರಾರಂಭಿಸಿದವು.
ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಬಾವಿಹಳ್ಳಿ ಸದ್ದಾಂ ಹುಸೇನ್, ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಮೊಹಮ್ಮದ್ ಸುಫಿಯಾನ್ ಸಖಾಫಿ, ಪ್ರಮುಖರಾದ ಕೆ.ಗೌಸ್ ಸಾಹೇಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಶಾಂತನಗೌಡ ಇತರರಿದ್ದರು.