ಸಂಡೂರಿನಲ್ಲಿ ಪುರಸಭೆ ಅಧಿಕಾರಿಗಳು ಅಂಗಡಿಗೆ ದಾಳಿ ನಡೆಸಿದರು. ಪರಿಸರ ಅಭಿಯಂತರೆ ಡಿ.ಅನ್ನಪೂರ್ಣ, ಆರೋಗ್ಯ ನೀರಕ್ಷಕಿ ಶಿವರಂಜಿನಿ, ಅಕೌಂಟೆಂಟ್ ಜಗದೀಶ ಇತರರಿದ್ದರು. 
ಬಳ್ಳಾರಿ

ಬಟ್ಟೆ ಚೀಲ ತರುವಂತೆ ಮನವೋಲಿಸಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಪರಿಸರ ಅಭಿಯಂತರೆ ಡಿ.ಅನ್ನಪೂರ್ಣ ಹೇಳಿಕೆ
  • 6ಕೆಜಿ ಪ್ಲಾಸ್ಟಿಕ್ ವಶ
ಸಂಡೂರು: ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದು, ಮರು ಬಳಕೆಗೆ ಬಾರದ ಪ್ಲಾಸ್ಟಿಕ್ ಬಳಕೆ ಕಾನೂನು ಬಾಹೀರ. ವ್ಯಾಪಾರಿಗಳು ಪ್ಲಾಸ್ಟಿಕ್ ಚೀಲಗಳನ್ನು ಬಳಸಬಾರದು ಎಂದು ಪರಿಸರ ಅಭಿಯಂತರೆ ಡಿ.ಅನ್ನಪೂರ್ಣ ಹೇಳಿದರು. ಪುರಸಭೆ ಅಧಿಕಾರಿಗಳು ಪಟ್ಟಣದ 20ಕ್ಕೂ ಹೆಚ್ಚು ಅಂಗಡಿಗಳ ಮೇಲೆ ಶುಕ್ರವಾರ ದಾಳಿ ನಡೆಸಿ 6ಕೆಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು 2800 ರೂ. ದಂಡ ವಿಧಿಸಿದರು.
ಗ್ರಾಹಕರಿಗೆ ಬಟ್ಟೆ ಚೀಲಗಳನ್ನು ತರುವಂತೆ ಮನವೋಲಿಸಬೇಕು. ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಚೀಲ ಕೊಟ್ಟರೆ ಬಟ್ಟೆ ಚೀಲ ಕೊಡುವಂತೆ ತಿಳಿಸಿದರೆ ಪ್ಲಾಸ್ಟಿಕ್ ನಿರ್ಮೂಲನೆ ಸಾಧ್ಯ ಎಂದರು. ಆರೋಗ್ಯ ನಿರೀಕ್ಷಕಿ ಶಿವರಂಜಿನಿ ಇತರರಿದ್ದರು.