ಕೊಟ್ಟೂರು ಸಾರ್ವಜನಿಕ ಗ್ರಂಥಾಲಯದಲ್ಲಿ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನ ಆಚರಿಸಲಾಯಿತು. ಶಿಕ್ಷಕ ಜಿ.ಮಲ್ಲಿಕಾರ್ಜುನ, ಶಾಖಾಧಿಕಾರಿ ಮಲ್ಲಪ್ಪ ಗುಡ್ಲಾನೂರ್, ನಿವೃತ್ತ ಮುಖ್ಯಶಿಕ್ಷಕ ಮಹಾಂತೇಶ ಇತರರಿದ್ದರು. 
ಬಳ್ಳಾರಿ

ಓದುವ ಹವ್ಯಾಸದಿಂದ ವ್ಯಕ್ತಿತ್ವ ವಿಕಸನ

ಶಾಮಸುಂದರ್ ಕೊಪ್ಪಳಕರ್
ಕೊಟ್ಟೂರು: ಪುಸ್ತಕಗಳು ಜ್ಞಾನದ ಭಂಡಾರವಾಗಿದ್ದು. ಪುಸ್ತಕ ಜ್ಞಾನ ವಿವೇಚನೆ, ಕಲ್ಪನಾ ಶಕ್ತಿ ಹಾಗೂ ಸಂಸ್ಕೃತಿಯ ವಾಹಕವಾಗಿದೆ ಎಂದು ಶಿಕ್ಷಕ ಜಿ.ಮಂಜುನಾಥ ಹೇಳಿದರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯ ಓದುವ ಹವ್ಯಾಸ ಬೆಳೆಸಿಕೊಂಡರೆ ಜ್ಞಾನದ ಜತೆ ವ್ಯಕ್ತಿತ್ವ ವಿಕಸನ ಆಗಲಿದೆ ಎಂದರು.
ನಗರದ ಶಾಖಾ ಗ್ರಂಥಾಲಯ ಅಧಿಕಾರಿ ಮಲ್ಲಪ್ಪ ಗುಡ್ಲಾನೂರ್ ಮಾತನಾಡಿ, ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ಮತ್ತು ಇತರ ಮಹಾನ್ ನಾಯಕರ ನೆನಪಿಗಾಗಿ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ಗ್ರಂಥಾಲಯ ಸದ್ಬಳಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಿ ಎಂದು ತಿಳಿಸಿದರು. ಶಿಕ್ಷಕ ವೈ.ಎಂ.ವಿಜಯಕುಮಾರ್, ನಿವೃತ ಮುಖ್ಯಶಿಕ್ಷಕ ಮಹಾಂತೇಶ, ನಿವೃತ್ತ ಹಿರಿಯ ಫಾರ್ಮಸಿಸ್ಟ್ ಬಚೇನಹಳ್ಳಿ ಈಶಪ್ಪ, ಅಂಚೆ ಇಲಾಖೆ ನೌಕರ ಕಲ್ಲೇಶಪ್ಪ ಇತರರಿದ್ದರು.