ದಾಸಾಪುರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಕೆರೆ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮವನ್ನು ಯೋಜನೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಉದ್ಘಾಟಿಸಿದರು. ಕ್ಷೇತ್ರ ಯೋಜನಾಧಿಕಾರಿ ವಸಂತ್ ಎಸ್., ಕೆರೆ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ದೊಡ್ಡ ಮುದುಕನಗೌಡ, ಅಧ್ಯಕ್ಷ ಬುಳ್ಳಪ್ಪ, ಉಪಾಧ್ಯಕ್ಷ ಈಶ್ವರಪ್ಪ, ಕೆರೆ ಇಂಜಿನಿಯರ್ ಸತೀಶ್, ಗ್ರಾಪಂ ಮಾಜಿ ಸದಸ್ಯ ಟಿ.ಚಂದ್ರಪ್ಪ ಇತರರಿದ್ದರು.  
ಬಳ್ಳಾರಿ

ಕೆರೆಗಳ ಸಂರಕ್ಷಣೆಗೆ ಜನರು ಸಹಕರಿಸಲಿ

ಪ್ರಮುಖ ಮುಖ್ಯಾಂಶಗಳು

  • ಧ.ಗ್ರಾ.ಯೋ. ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿಕೆ
  • ಸಿರಿಗೇರಿ ದಾಸಾಪುರ ನಮ್ಮೂರು ನಮ್ಮ ಕೆರೆ
ಸಿರಿಗೇರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯಡಿ 980ಕ್ಕೂ ಅಧಿಕ ಕೆರೆಗಳಿಗೆ ಜೀವ ತುಂಬಲಾಗಿದ್ದು, ಜನರು ಕೆರೆಗಳನ್ನು ಸಂರಕ್ಷಿಸಲು ಸಹಕರಿಸಬೇಕೆಂದು ಸಂಘದ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು.
ದಾಸಾಪುರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೊಂಚಗೇರಿ ಗ್ರಾಪಂ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘಗಳನ್ನು ರಚಿಸಿ, ಬ್ಯಾಂಕ್ ಮೂಲಕ ಸಾಲ ಕೊಡಿಸುವುದಲ್ಲ್ಲದೆ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಕೆರೆ ಪುನಃಶ್ಚೇತನ, ದೇವಸ್ಥಾನಗಳ ಜೀರ್ಣೋದ್ಧಾರ, ಜ್ಞಾನದೀಪ ಕಾರ್ಯಕ್ರಮದಡಿ ಶಿಕ್ಷಕರ ನೇಮಕ, ಶುದ್ಧಗಂಗಾ ಘಟಕ ರಚನೆ ಸೇರಿದಂತೆ ಅನೇಕ ಜನಪರ ಕೆಲಸ ಮಾಡುತ್ತಿದೆ ಎಂದರು.
ತಾಲೂಕು ಕ್ಷೇತ್ರ ಯೋಜನಾಧಿಕಾರಿ ವಸಂತ್ ಎಸ್., ಕೆರೆ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ದೊಡ್ಡ ಮುದುಕನಗೌಡ, ಅಧ್ಯಕ್ಷ ಬುಳ್ಳಪ್ಪ, ಉಪಾಧ್ಯಕ್ಷ ಈಶ್ವರಪ್ಪ, ಕೆರೆ ಇಂಜಿನಿಯರ್ ಸತೀಶ್, ಗ್ರಾಪಂ ಮಾಜಿ ಸದಸ್ಯ ಟಿ.ಚಂದ್ರಪ್ಪ, ಪ್ರಮುಖರಾದ ಮರಿತಿಮ್ಮಪ್ಪ, ಹಳ್ಳಿ ಬಸವರಾಜ, ರುದ್ರಪ್ಪ, ಪ್ರಭುಸ್ವಾಮಿ, ಕೃಷಿ ಮೇಲ್ವಿಚಾರಕ ವೀರೇಶ, ವಲಯ ಮೇಲ್ವಿಚಾರಕ ಶಿವಪ್ಪ ಪೂಜಾರಿ, ಸೇವಾ ಪ್ರತಿನಿಧಿ ಹೊನ್ನೂರಸ್ವಾಮಿ, ರೈತ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.