ಕಾನಹೊಸಹಳ್ಳಿ ನಾಡಕಚೇರಿಯಲ್ಲಿ ಆಧಾರ್ ತಿದ್ದುಪಡಿಗಾಗಿ ಜನರು ಮುಗಿಬಿದ್ದಿರುವುದು.
- ಸಾರ್ವಜನಿಕರು ಆಧಾರ್ ಕಾರ್ಡ್ ತಿದ್ದುಪಡಿ
- ಕಾನಹೊಸಹಳ್ಳಿ ನಾಡಕಚೇರಿ ತಿದ್ದುಪಡಿ ಸ್ಥಗಿತ
ಕಾನಹೊಸಹಳ್ಳಿ: ಗ್ರಾಮದ ನಾಡಕಚೇರಿಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಗೆ ಸಾರ್ವಜನಿಕರು ಮುಗಿಬಿದ್ದಿರುವುದು ಕಂಡುಬಂತು.
ಜನರು ಸಾಲು ನಿಲ್ಲದ ಕಾರಣ ಸಿಬ್ಬಂದಿ ತಿದ್ದುಪಡಿ ಕಾರ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಿದ್ದರು. ಇದರಿಂದಾಗಿ ಸಿಬ್ಬಂದಿಯೊಂದಿಗೆ ಜನರು ವಾಗ್ವಾದ ನಡೆಸಿದರು. ಬಳಿಕ ಸಾಲಾಗಿ ಬರುವಂತೆ ಮನವಿ ಮಾಡಿ ಕಾರ್ಯ ಮುಂದುವರಿಸಿದರು. ನಾನು ಮಕ್ಕಳೊಂದಿಗೆ ಬೆಳಗ್ಗೆ 9 ಗಂಟೆಗೆ ಬಂದಿರುವೆ. ಮಧ್ಯಾಹ್ನ 3 ಗಂಟೆಯಾದರೂ ಕೆಲಸ ಮಾಡಿಕೊಡುತ್ತಿಲ್ಲವೆಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರದ ಸಿಬ್ಬಂದಿ, ಪ್ರತಿಯೊಬ್ಬರಿಗೂ ಟೋಕನ್ ನಂಬರ್ ನೀಡಿದ್ದೇವೆ. ಅದರಂತೆ ಕ್ರಮವಾಗಿ ಬಂದು ಆಧಾರ್ ತಿದ್ದುಪಡಿ ಮಾಡಿಸಿಕೊಳ್ಳಬೇಕು. ಆರೋಪ ಮಾಡಿದ ಮಹಿಳೆ ಟೋಕನ್ ಪಡೆದುಕೊಂಡಿಲ್ಲ. ರೈತರು, ವಿದ್ಯಾರ್ಥಿಗಳು ಕಳೆದೊಂದು ವಾರದಿಂದ ಆಧಾರ್ ತಿದ್ದುಪಡಿ ಮಾಡಿಸಿಕೊಳ್ಳುತ್ತಿರುವುದು ಹೆಚ್ಚಾಗಿರುವುದರಿಂದ ತಹಸೀಲ್ದಾರ್ ಸೂಚನೆ ಮೇರೆಗೆ ಅವಧಿ ಮೀರಿ ಕೆಲಸ ಮಾಡುತ್ತಿದ್ದೇವೆ ಎಂದರು.