ಬಳ್ಳಾರಿಯ ಜಿಪಂ ಆವರಣದಲ್ಲಿ ಮನರೇಗಾ ಯೋಜನೆಯಡಿ ಬಾಕಿ ವೇತನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಎಐಕೆಕೆಎಂಎಸ್ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಜಿಲ್ಲಾಧ್ಯಕ್ಷ ಗೋವಿಂದ್, ಪ್ರಮುಖರಾದ ಮಂಜುನಾಥ, ಲಕ್ಷ್ಮೀಕಾಂತ್, ಗಾದಿಲಿಂಗಪ್ಪ, ಶೇಖರಪ್ಪ, ವೀರಭದ್ರ ಇತರರಿದ್ದರು. 
ಬಳ್ಳಾರಿ

ಬಾಕಿ ವೇತನ ಪಾವತಿಸಿ

ಪ್ರಮುಖ ಮುಖ್ಯಾಂಶಗಳು

  • ಬ್ಯಾಂಕ್ ಖಾತೆಗಳಿಗೆ ಜಮಾ
ಬಳ್ಳಾರಿ : ನರೇಗಾ ಯಡಿ ಮೇ ಹಾಗೂ ಜೂನ್ ತಿಂಗಳಲ್ಲಿ ನಿರ್ವಹಿಸಿದ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ, ಇಲ್ಲಿನ ಜಿಪಂ ಆವರಣದಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್)ವತಿಯಿಂದ ಪ್ರತಿಭಟನೆ ನಡೆಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ಕಾರ್ಮಿಕರು ಕುಟುಂಬದ ಜೀವನೋಪಾಯಕ್ಕಾಗಿ ಈ ಕೂಲಿ ಹಣವನ್ನೇ ಅವಲಂಬಿಸಿದ್ದಾರೆ. ಆದರೆ ವೇತನ ಪಾವತಿಯಲ್ಲಿ ಉಂಟಾಗಿರುವ ವಿಳಂಬದಿಂದ ಕಾರ್ಮಿಕರು ನರೇಗಾ ಯಡಿ ಮೇ ಹಾಗೂ ಜೂನ್ ತಿಂಗಳಲ್ಲಿ ನಿರ್ವಹಿಸಿದ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ, ಇಲ್ಲಿನ ಜಿಪಂ ಆವರಣದಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್)ವತಿಯಿಂದ ಪ್ರತಿಭಟನೆ ನಡೆಯಿತು., ಆಹಾರ, ಮಕ್ಕಳ ಶಿಕ್ಷಣ, ಆರೋಗ್ಯ ವೆಚ್ಚ ಹಾಗೂ ಇತರೆ ಅಗತ್ಯ ಪೂರೈಸಲು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ಮನರೇಗಾ ಯೋಜನೆಯಡಿ ಬಾಕಿ ಇರುವ ಮೇ ಮತ್ತು ಜೂನ್ ತಿಂಗಳ ಕೂಲಿ ವೇತನವನ್ನು ಕೂಡಲೇ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಜಮಾ ಆಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಭಾಗದ ಕೃಷಿ ಚಟುವಟಿಕೆಗಳಿಗೆ ಜಿವನಾಡಿಯಾದ ತುಂಗಾಭದ್ರಾ ಜಲಾಶಯಕ್ಕೆ ಇನ್ನೂ ನೀರು ತುಂಬಿರದ ಕಾರಣ, ಇಲ್ಲಿ ಕೃಷಿ ಚಟುವಟಿಕೆ ಪ್ರಾರಂಭವಾಗದೆ ಕೃಷಿ ಕೂಲಿ ಕಾರ್ಮಿಕರಿಗೆ ಯಾವುದೇ ರೀತಿಯ ಕೆಲಸ ಸಿಗುತ್ತಿಲ್ಲ. ಜೀವನದ ಆದಾಯಕ್ಕೆ ಸಂಕಷ್ಟ ಪಡುವಂತಾಗಿದೆ, ಕೃಷಿ ಕಾರ್ಮಿಕರಿಗೆ ಯಾವುದಾದರೂ ಯೋಜನೆಯಲ್ಲಿ ಕೆಲಸ ನೀಡಿ, ಕೂಲಿ ಒದಗಿಸಬೇಕು ಎಂದು ಒತ್ತಾಯಿಸಿದರು.