ಹೊರಗುತ್ತಿಗೆ ನೌಕರ ಸಂಘದ ಪದಾಧಿಕಾರಿಗಳು ಹಗರಿಬೊಮ್ಮನಹಳ್ಳಿಯಲ್ಲಿ ಶಾಸಕ ಕೆ. ನೇಮಿರಾಜ್ ನಾಯ್ಕ ಗೆ ಭಾನುವಾರ ಮನವಿ ಸಲ್ಲಿಸಿದರು. ಜನವಾದಿ ಸಂಘದ ಜಿಲ್ಲಾ ಸಂಚಾಲಕಿ ಸರ್ದಾರ್ ಹುಲಿಯಮ್ಮ, ಪ್ರಮುಖರಾದ ಕೆ.ಹುಲಿಗೆಮ್ಮ, ಕೊಟ್ರಮ್ಮ, ಮರುಳ ಸಿದ್ದಮ್ಮ, ಮಂಗಳಾ, ಮಾಲಾಶ್ರೀ, ಹನುಮಕ್ಕ, ಪಲ್ಲವಿ, ಜ್ಯೋತಿ, ನೇತ್ರಮ್ಮ, ಸವಿತಾ, ಮಾಳಮ್ಮ, ಭಾಗ್ಯಮ್ಮ, ಶಶಿಕಲಾ, ಶೀಲಾ ಇತರರಿದ್ದರು. 
ಬಳ್ಳಾರಿ

ಕನಿಷ್ಠ 36 ಸಾವಿರ ರೂ. ವೇತನ ನೀಡಲಿ

ಕುರುವತ್ತಿ ಶ್ರೀಕಾಂತಪ್ಪ

ಹಗರಿಬೊಮ್ಮನಹಳ್ಳಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಹೊರಗುತ್ತಿಗೆ ಸಿಬ್ಬಂದಿಗೆ ಕನಿಷ್ಠ ವೇತನ ನೀಡುವಂತೆ ಆಗ್ರಹಿಸಿ ಶಾಸಕ ಕೆ. ನೇಮಿರಾಜ್ ನಾಯ್ಕಗೆ ಹೊರಗುತ್ತಿಗೆ ನೌಕರರ ಸಂಘಟನೆಯಿಂದ ಭಾನುವಾರ ಮನವಿ ಸಲ್ಲಿಸಲಾಯಿತು.

ಜನವಾದಿ ಸಂಘದ ಜಿಲ್ಲಾ ಸಂಚಾಲಕಿ ಸರ್ದಾರ್ ಹುಲಿಗೆಮ್ಮ ಮಾತನಾಡಿ, ಅಡುಗೆಯವರು, ಸಹಾಯಕರು, ನೈರ್ಮಲ್ಯ, ಕಾವಲುಗಾರರು, ಡಿ-ಗ್ರೂಪ್ ಅಟೆಂಡರ್, ಕಂಪ್ಯೂಟರ್ ಹಾಗೂ ಡೇಟಾ ಎಂಟ್ರಿ ಆಪರೇಟರ್ ಮತ್ತು ಅತಿಥಿ ಶಿಕ್ಷಕರು ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಡಿ ದುಡಿಯುತ್ತಿದ್ದು, ಸರ್ಕಾರ ಮತ್ತು ಕಾರ್ಮಿಕ ಇಲಾಖೆ ಕನಿಷ್ಠ 36 ಸಾವಿರ ರೂ. ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿ ಮುಖಂಡ ನಾಗರಾಜ್ ನಾಯ್ಕ, ವೇತನ ಚೀಟಿ, ನೇಮಕಾತಿ ಆದೇಶ, ಗುರುತಿನ ಚೀಟಿ, ಸೇವಾ ಪ್ರಮಾಣಪತ್ರ, ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.