ಬಳ್ಳಾರಿಯ ಡಿಸಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆಯಿಂದ ವಿದ್ಯುತ್ ವಿತರಣಾ ಕ್ಷೇತ್ರದ ಖಾಸಗೀಕರಣ ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆ ನಡೆಯಿತು. ಸಂಘದ ರಾಜ್ಯಾಧ್ಯಕ್ಷ ಆರ್.ಮಾಧವರೆಡ್ಡಿ, ಪದಾಧಿಕಾರಿಗಳಾದ ಶ್ರೀಶೈಲ ಆಲದಹಳ್ಳಿ, ಟಿ.ಎಂ.ಶಿವಕುಮಾರ್, ಕೆ.ಮೌನೇಶ್, ಬಿ.ಕೆ.ನಾಗರಾಜ್, ಎಂ.ಎಲ್.ಕೆ.ನಾಯ್ದು, ಕಾಡಪ್ಪ, ನೀಲಕಂಠ ಇತರರಿದ್ದರು. === 
ಬಳ್ಳಾರಿ

ಖಾಸಗೀಕರಣ ಪ್ರಕ್ರಿಯೆಗೆ ವಿರೋಧ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ವಿದ್ಯುತ್ ಸೇವೆಯನ್ನು ಇನಷ್ಟು ಪರಿಣಾಮಕಾರಿ
  • ವಿದ್ಯುತ್ ಯೋಜನೆಗಳ ಮೇಲೆ ಅವಲಂಬಿತ
ಬಳ್ಳಾರಿ : ರಾಜ್ಯದಲ್ಲಿ ವಿದ್ಯುತ್ ವಿತರಣಾ ಕ್ಷೇತ್ರದ ಖಾಸಗೀಕರಣ ಪ್ರಕ್ರಿಯೆ ವಿರೋಧಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಸಂಘದ ರಾಜ್ಯಾಧ್ಯಕ್ಷ ಆರ್.ಮಾಧವರೆಡ್ಡಿ ಮಾತನಾಡಿ, ವಿದ್ಯುತ್ ವಿತರಣಾ ಕ್ಷೇತ್ರ ಖಾಸಗೀಕರಣಗೊಳಿಸುವುದರಿಂದ ಸದ್ಯ ರಾಜ್ಯದಲ್ಲಿ ಲಕ್ಷಾಂತರ ರೈತರು ಹಾಗೂ ರಿಯಾಯತಿ ವಿದ್ಯುತ್ ಯೋಜನೆಗಳ ಮೇಲೆ ಅವಲಂಬಿತರಾಗಿದ್ದಾರೆ.
ಖಾಸಗಿ ಕಂಪನಿಗಳ ಮುಖ್ಯ ಉದ್ದೇಶ ಲಾಭ ಗಳಿಕೆಯಾಗುವುದರಿಂದ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ಸಬ್ಸಿಡಿ ಹಾಗೂ ರಿಯಾಯತಿಗಳನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಇದರಿಂದ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗಿ ರೈತರ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಉದ್ಯೋಗ ಭದ್ರತೆಗೆ ಧಕ್ಕೆ ರಾಜ್ಯದ ವಿದ್ಯುತ್ ನಿಗಮಗಳು ಹಾಗೂ ಎಸ್ಕಾಂಗಳಲ್ಲಿ ಸಾವಿರಾರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಖಾಸಗೀಕರಣದಿಂದ ಗುತ್ತಿಗೆ ಪದ್ಧತಿ ಹೆಚ್ಚಾಗಿ ಶಾಶ್ವತ ಉದ್ಯೋಗಗಳು ಕಡಿಮೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಸರ್ಕಾರ ಕೂಡಲೇ ಖಾಸಗೀಕರಣ ಪ್ರಕ್ರಿಯೆ ತಕ್ಷಣವೇ ಕೈಬಿಡಬೇಕು. ಎಸ್ಕಾಂಗಳನ್ನು ಆರ್ಥಿಕ ಹಾಗೂ ತಾಂತ್ರಿಕವಾಗಿ ಬಲಪಡಿಸಲು ವಿಶೇಷ ಯೋಜನೆ ರೂಪಿಸಬೇಕು. ರೈತರಿಗೆ ನೀಡುತ್ತಿರುವ ಉಚಿತ ಹಾಗೂ ರಿಯಾಯತಿ ವಿದ್ಯುತ್ ಯೋಜನೆಗಳನ್ನು ಮುಂದುವರಿಸಬೇಕು. ವಿದ್ಯುತ್ ಕ್ಷೇತ್ರದ ಯಾವುದೇ ನೀತಿ ಬದಲಾವಣೆಗೆ ಮುನ್ನ ರೈತ ಸಂಘಗಳು, ಕಾರ್ಮಿಕ ಸಂಘಟನೆಗಳು ಹಾಗೂ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಬೇಕು. ಸಾರ್ವಜನಿಕ ವಿದ್ಯುತ್ ಸೇವೆಯನ್ನು ಇನಷ್ಟು ಪರಿಣಾಮಕಾರಿಯಾಗಿ ಮಾಡಲು ಅಗತ್ಯ ಹೂಡಿಕೆ ಮಾಡಬೇಕು ಎಂದು ಆಗ್ರಹಿಸಿದರು. ಬಳಿಕ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
===