ಬಳ್ಳಾರಿಯ ಗಡಗಿ ಚನ್ನಪ್ಪ ವೃತ್ತದಲ್ಲಿ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ ಸಂಘಟನೆಯಿಂದ ಮಸೂದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸಿದರು. ಸದಸ್ಯರಾದ ವಿಜಯಲಕ್ಷ್ಮೀ, ಜಯಶ್ರೀ, ಅನಿತಾ, ವಿದ್ಯಾಶ್ರೀ ಇತರರಿದ್ದರು. 
ಬಳ್ಳಾರಿ

ಮಸೂದೆ ತಿದ್ದುಪಡಿಗೆ ವಿರೋಧ

ಪ್ರಮುಖ ಮುಖ್ಯಾಂಶಗಳು

  • ತಿದ್ದುಪಡಿ
ಬಳ್ಳಾರಿ : ತೃತೀಯಲಿಂಗಿಗಳ ಹಕ್ಕು ಸಂರಕ್ಷಣೆಯ ಮಸೂದೆ ತಿದ್ದುಪಡಿ ವಿರೋಧಿಸಿ, ಇಲ್ಲಿನ ಗಡಗಿ ಚನ್ನಪ್ಪ ವೃತ್ತದಲ್ಲಿ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯಿತು.
ಈ ಮಸೂದೆಯೂ ಲಿಂಗತ್ವ ತೃತೀಯ ಲಿಂಗಿಗಳ ಗೌರವವನ್ನು ಗಂಭೀರವಾಗಿ ಹಾಳು ಮಾಡುವುದು ಹಾಗೂ ಗುರುತಿನ ಆಧಾರದ ಸ್ವಯಂ ನಿರ್ಣಯದ ಹಕ್ಕು ಕಸಿದುಕೊಳ್ಳುತ್ತದೆ. ಸಂವಿಧಾನ ನೀಡಿರುವ ರಕ್ಷಣೆಗಳಿಗೆ ಧಕ್ಕೆ ಉಂಟು ಮಾಡಲಿದೆ. ಅಲ್ಲದೆ, ಈ ಮಸೂದೆ ಅನ್ವಯ ಸರ್ಕಾರ ನೇಮಿಸಿದ ವೈದ್ಯಕೀಯ - ಅಧಿಕಾರಿಗಳು ಈ ವ್ಯವಸ್ಥೆಯ ಮೂಲಕ ನಮ್ಮ ದೇಹಗಳ ಮೇಲೆ ಹಿಂಸೆಯನ್ನು ಹೇರುತ್ತಾರೆ. ವೈದ್ಯಕೀಯ ಮಂಡಳಿಗಳಿಗೆ ಲಿಂಗತ್ವ ಗುರುತು ಪ್ರಮಾಣಿಕರಿಸುವ ಹಾಗೂ ಖಾಸಗಿ ವೈದ್ಯಕೀಯ ಮಾಹಿತಿಯನ್ನು ಬಹಿರಂಗಪಡಿಸುವ ಅಧಿಕಾರವನ್ನು ನೀಡಲಾಗುತ್ತದೆ. ಇದರಿಂದ ಗೌರವ ಹಾಗೂ ಗೌಪ್ಯತೆಯ ಹಕ್ಕಿನ ಗಂಭೀರ ಉಲ್ಲಂಘನೆಯಾಗಲಿದೆ. ಆದ್ದರಿಂದ, ಕೇಂದ್ರ ಸರ್ಕಾರ ಕೂಡಲೇ ಮಸೂದೆ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳಬೇಕು. ಭವಿಷ್ಯದಲ್ಲಿ ಯಾವುದೇ ತೃತೀಯ ಲಿಂಗಿಗಳ ಸಂಬಂಧಪಟ್ಟ ಮಸೂದೆ ತಿದ್ದುಪಡಿ ಮಾಡುವ ಮುನ್ನ ಸಮುದಾಯ, ನಾಗರಿಕ ಸಮಾಜ, ಕಾನೂನು ತಜ್ಞರ ಹಾಗೂ ಆರೋಗ್ಯ ವೃತ್ತಿಪರರೊಂದಿಗೆ ಅರ್ಥಪೂರ್ಣ ಹಾಗೂ ಪಾರದರ್ಶಕ ಸಮಾಲೋಚನೆ ನಡೆಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
===