ಕಂಪ್ಲಿ ಬಡೇ ಸಾಹೇಬ್ ದರ್ಗಾದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಪ್ರಾರ್ಥನೆ ಸಲ್ಲಿಸಿದರು.  
ಬಳ್ಳಾರಿ

ಅಧಿವೇಶನದಲ್ಲಿ ಉಕ ಸಮಸ್ಯೆಗಳ ಮುಕ್ತ ಚರ್ಚೆ

ಅಶೋಕ್ ಕುಮಾರ್ ಎನ್
ಕಂಪ್ಲಿ: ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಚರ್ಚೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಪಟ್ಟಣದ ಹಜರತ್ ಸೈಯದ್ ಷಾ ಬಡೇಸಾಹೇಬ್ ಖಾದ್ರಿ ದರ್ಗಾಕ್ಕೆ ಭೇಟಿ ನೀಡಿದಾಗ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಅಧಿವೇಶನದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದವರು ಮುಕ್ತವಾಗಿ ಚರ್ಚಿಸುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಉತ್ತರಿಸಲಿದ್ದಾರೆ ಎಂದರು.
ಶಾಸಕರ ಕಾಳಜಿಯಿಂದಾಗಿ ಕಂಪ್ಲಿ, ಕುರುಗೋಡು ಭಾಗ ಅಭಿವೃದ್ಧಿಯತ್ತ ಸಾಗುತ್ತಿದೆ. ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಕೆಕೆಆರ್‌ಡಿಬಿ ಅನುದಾನ ಕೊಡಿಸುವಲ್ಲಿ ಸಂಪೂರ್ಣ ಸಹಕಾರ ನೀಡುವೆ. ಶಾಮನೂರು ಶಿವಶಂಕರಪ್ಪ ಅವರು ಹಿರಿಯ ಶಾಸಕರಾಗಿದ್ದು, ರಾಜ್ಯದ ಅಭಿವೃದ್ಧಿಗೆ ನಿರಂತರ ಶ್ರಮಿಸಿದ್ದಾರೆ ಎಂದು ಹೇಳಿದರು.
ಇದಕ್ಕೂ ಮುನ್ನ ಅಂಬೇಡ್ಕರ್ ವೃತ್ತ, ಮುದ್ದಾಪುರ ಅಗಸಿಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಮುಸ್ಲಿಂ ಸಮುದಾಯದವರು ಗೌರವಿಸಿದರು. ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಖಾದ್ರಿ, ಸೈಯದ್ ಷಾ ಮೆಹಮೂದ್ ಖಾದ್ರಿ, ಪ್ರಮುಖರಾದ ಅಕ್ಕಿ ಜಿಲಾನ್, ಸೈಯದ್ ಶುಕ್ರು, ಬಿ.ಜಾಫರ್ ಸಾದಿಕ್, ಆರ್.ಜಿಲಾನ್, ಕೆ.ಮೆಹಬೂಬ್, ಯಾಳ್ಪಿ ಮುನಾಫ್, ಎನ್.ಮೌಲಾ ಹುಸೇನ್, ಕೆ.ಮಸ್ತಾನ್ ವಲಿ, ಅಬ್ದುಲ್ ವಾಹೀದ್, ಕೆ.ಮನೋಹರ, ಎಂ.ಗೋಪಾಲ, ಪಿ.ಪಾಂಡುರಂಗ, ಬಾಷಾ, ಹೋಟೆಲ್ ಶೆಕ್ಷಾವಲಿ ಇತರರಿದ್ದರು.