ಆಟೋ ಚಾಲಕನಿಗೆ ಆನ್‌ಲೈನ್ ವಂಚನೆ 
ಬಳ್ಳಾರಿ

ಆಟೋ ಚಾಲಕನಿಗೆ ಆನ್‌ಲೈನ್ ವಂಚನೆ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಸಹೋದರಿ
ಬಳ್ಳಾರಿ : ಇಲ್ಲಿನ ಆಟೋ ಚಾಲಕರೊಬ್ಬರಿಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ 53.49 ಲಕ್ಷ ರೂ. ವಂಚಿಸಲಾಗಿದೆ. ಆಟೋ ಚಾಲಕನ ಸಹೋದರಿಯ ಮೊಬೈಲ್‌ಗೆ ಅಪರಿಚಿತ ಮಹಿಳೆಯೊಬ್ಬರು ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದರು. ಷೇರು ಮಾರುಕಟ್ಟೆ ಬಗ್ಗೆ ಉಚಿತ ಸಲಹೆ ನೀಡುವುದಾಗಿ ಅದರಲ್ಲಿ ಹೇಳಲಾಗಿತ್ತು. ಅದನ್ನು ಒಪ್ಪಿ ಗ್ರೂಪ್‌ವೊಂದಕ್ಕೆ ಸೇರಿದ್ದರು. ತಾವು ಸೂಚಿಸುವ ಕಡೆ ಹೂಡಿಕೆ ಮಾಡಿದರೆ ಶೇ. 5ರಿಂದ 10ರವರೆಗೆ ಲಾಭಾಂಶ ನೀಡುವುದಾಗಿ ವಂಚಕ ನಂಬಿಸಿದ್ದ. ನಂತರ ಜ.19 ಹಾಗೂ ಜ.20ರವರೆಗೆ ಹಂತ ಹಂತವಾಗಿ 53.49 ಲಕ್ಷ ರೂ. ಹಣ ಪಾವತಿಸಿದ್ದಾರೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
===