ಬಳ್ಳಾರಿಯ ಹೊರವಲಯದಲ್ಲಿ ಒತ್ತುವರಿಯಾದ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ತೆರವುಗೊಳಿಸಿ ನಾಮಫಲಕ ಅಳವಡಿಸಲಾಯಿತು. ಎಡಿಸಿ ಮಹಮ್ಮದ್ ಎನ್. ಜುಬೇರ್, ಎಸಿ ಎಚ್.ಡಿ. ರಾಜೇಶ್, ತಹಸೀಲ್ದಾರ್ ಟಿ.ರೇಖಾ ಇತರರಿದ್ದರು. 
ಬಳ್ಳಾರಿ

ಮುಂದುವರೆದ ತೆರವು ಕಾರ್ಯಾಚರಣೆ

ಪ್ರಮುಖ ಮುಖ್ಯಾಂಶಗಳು

  • ಕಾರ್ಯಾಚರಣೆ
ಬಳ್ಳಾರಿ : ನಗರದ ಹೊರವಲಯದ ನಾನಾ ಸರ್ವೇ ನಂಬರ್‌ಗಳ ಒಟ್ಟು 15.05 ಎಕರೆ ಒತ್ತುವರಿಯಾಗಿದ್ದ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ತೆರವುಗೊಳಿಸಿ ಸ್ವಾಧೀನ ಪಡಿಸಿಕೊಳ್ಳಲಾಯಿತು.
ಸರ್ವೇ ನಂ. 977ರ 13.92ಎಕರೆ ಹಾಗೂ ಸರ್ವೇ ನಂ. 1.13 ಎಕರೆ ಸೇರಿದಂತೆ ಒಟ್ಟಾರೆ 15.05 ಎಕರೆ ಒತ್ತುವರಿಯಾದ ಜಮೀನನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸರ್ಕಾರಿ ಜಮೀನು ಎಂಬುದಾಗಿ ನಾಮಫಲಕ ಅಳವಡಿಸಲಾಯಿತು. ಈ ಭೂಮಿಯೂ ಐಜಿಪಿ ಅವರ ನಿವಾಸ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿತ್ತು ಎಂಬುದಾಗಿ ತಿಳಿದು ಬಂದಿದೆ.