ಬಳ್ಳಾರಿಯ ಅವಂಭಾವಿಯ ದೇವಸ್ಥಾನದ ಹಿಂಭಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಗೋಡೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಎಡಿಸಿ ಮಹಮ್ಮದ್ ಎನ್.ಜುಬೇರ್, ಎಸಿ ಎಚ್.ಡಿ.ರಾಜೇಶ್, ತಹಸೀಲ್ದಾರ್ ಟಿ.ರೇಖಾ ಇದ್ದರು 
ಬಳ್ಳಾರಿ

ಮುಂದುವರೆದ ತೆರವು ಕಾರ್ಯಾಚರಣೆ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಕಾರ್ಯಾಚರಣೆ
ಬಳ್ಳಾರಿ : ನಗರದ ನಾನಾ ಕಡೆ ಹಲವು ವರ್ಷಗಳಿಂದ ಅಕ್ರಮವಾಗಿ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ಜಿಲ್ಲಾಡಳಿತವು ಕಾರ್ಯಾಚರಣೆಯ ಮೂಲಕ ಗುರುವಾರ ತೆರವುಗೊಳಿಸಿತು.
ಇಲ್ಲಿನ ಅವಂಭಾವಿಯ ದೇವಸ್ಥಾನದ ಹಿಂಭಾಗದಲ್ಲಿ ಒತ್ತುವರಿ ಮಾಡಿ ತಡೆಗೋಡೆ ನಿರ್ಮಿಸಿದ್ದ ರಸ್ತೆ ಸೇರಿದಂತೆ 22 ಸೆಂಟ್ಸ್ ವಿಸ್ತೀರ್ಣದ ಸರ್ಕಾರಿ ಜಾಗ ಅಧಿಕಾರಿಗಳು ವಶಕ್ಕೆ ಪಡೆಯಲಾಯಿತು. ತೆರವುಗೊಳಿಸಿದ ಜಾಗಕ್ಕೆ ಅಳವಡಿಸಿ ‘ ಸರ್ಕಾರಿ ಸ್ವತ್ತು’ ಎಂಬ ನಾಮಫಲಕ ಹಾಕಲಾಯಿತು. ಮುಂಜಾನೆಯೇ ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜೆಸಿಬಿ ಯಂತ್ರಗಳ ಮೂಲಕ ನೆಲಸಮ ಮಾಡಿದರು.
ಬಳಿಕ ನಲ್ಲಚೇರುವು ಪ್ರದೇಶದಲ್ಲಿ ಒತ್ತುವರಿಯಾಗಿದ್ದ 5.5 ಎಕರೆ ಜಮೀನು ಸರ್ಕಾರದ ಸ್ವತ್ತು ಎಂದು ನಾಮಫಲಕ ನೆಡಲಾಯಿತು. ನಂತರ ಭತ್ರಿ ಕಾಲನಿಯ ಈಶ್ವರ ದೇವಸ್ಥಾನದ ಬಳಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ಮತ್ತು ಮನೆ ತೆರವು ಕಾರ್ಯಾಚರಣೆ ಮಾಡಲಾಯಿತು.
====