ದೇವಲಾಪುರ ಗ್ರಾಪಂ ಸಭಾಂಗಣದಲ್ಲಿ ನಡೆದ ಪೋಷಕತ್ವ ಅರಿವು ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಟಿ.ಜಿ.ತ್ರಿವೇಣಿ, ಜಿ.ಅಂಜಿನಮ್ಮ, ಕೆ.ಸುಚಿತ್ರಾ, ಬಿ.ಈರಮ್ಮ, ಕೆ.ನೇತ್ರಾವತಿ ಇತರರಿದ್ದರು. 
ಬಳ್ಳಾರಿ

ಕಾನೂನಿನ್ವಯ ಮಕ್ಕಳ ಪೋಷಕತ್ವ ಪಡೆದುಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಕಾನೂನಿನ್ವಯ
  • ಮಕ್ಕಳನ್ನು
  • ದತ್ತು
ಕಂಪ್ಲಿ: ದೇವಲಾಪುರದ ಗ್ರಾಪಂ ಸಭಾಂಗಣದಲ್ಲಿ ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಪೋಷಕತ್ವ ಅರಿವು ಕಾರ್ಯಕ್ರಮ ನಡೆಯಿತು.
ಹೊಸಪೇಟೆಯ ಡಾನ್‌ಬಾಸ್ಕೋ ಸಂಸ್ಥೆಯ ಜಿಲ್ಲಾ ಸಂಯೋಜಕಿ ಜಿ.ಭಾಗ್ಯಾ ಮಾತನಾಡಿ, ಅನಾಥರೆಂದು ಪರಿಗಣಿಸಿದ ಮಕ್ಕಳು ಹಾಗೂ ಪರಿವಾರದ ಆರೈಕೆಯಿಂದ ವಂಚಿತರಾದ ಮಕ್ಕಳ ಪೋಷಕತ್ವವನ್ನು ಕಾನೂನಿನ್ವಯ ಪಡೆದುಕೊಳ್ಳಬಹುದಾಗಿದೆ. ಸರಿಯಾದ ಪಾಲನೆ ಮತ್ತು ಪೋಷಣೆಯ ಉದ್ದೇಶದಿಂದ ಪರಿವಾರದ ವ್ಯವಸ್ಥೆಯಲ್ಲಿ ಮಕ್ಕಳ ಪೋಷಕತ್ವವನ್ನು ನೀಡಲಾಗುವುದು.
ಕಾನೂನಿನ್ವಯ ಮಕ್ಕಳನ್ನು ದತ್ತು ಪಡೆದುಕೊಳ್ಳಬೇಕೆ ವಿನಹ ಮಕ್ಕಳನ್ನು ಮಾರುವುದಾಗಲಿ, ಕೊಳ್ಳುವುದಾಗಲಿ ಅಪರಾಧವಾಗಿದೆ ಎಂದರು. ಅಂಗನವಾಡಿ ಮೇಲ್ವಿಚಾರಕಿ ರೇಣುಕಾ, ಕಾರ್ಯಕರ್ತೆಯರಾದ ಟಿ.ಜಿ.ತ್ರಿವೇಣಿ, ಜಿ.ಅಂಜಿನಮ್ಮ, ಕೆ.ಸುಚಿತ್ರಾ, ಬಿ.ಈರಮ್ಮ, ಕೆ.ನೇತ್ರಾವತಿ ಮೂರು ಕ್ಲಸ್ಟರ್‌ನ 21 ಅಂಗನವಾಡಿ ಕಾರ್ಯಕರ್ತೆಯರಿದ್ದರು.