ಬಿಸಿಯೂಟ ತಯಾರಕರ ಬಾಕಿ ವೇತನ ಬಿಡುಗಡೆಗಾಗಿ ಅಕ್ಷರ ದಾಸೋಹ ಬಿಸಿಯೂಟ ಫೆಡರೇಷನ್‌ನಿಂದ ಬಿಸಿಯೂಟ ಸಹಾಯಕ ನಿರ್ದೇಶಕ ಕೆ.ಜಿ.ಆಂಜನೇಯ ಮೂಲಕ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಸೋಮವಾರ ಮನವಿ ಸಲ್ಲಿಸಲಾಯಿತು. ನಿಕಟ ಪೂರ್ವ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ವೀರಣ್ಣ, ಫೆಡರೇಷನ್ ತಾಲೂಕು ಅಧ್ಯಕ್ಷೆ ಜಿ. ಸುಜಾತಾ, ಪ್ರಧಾನ ಕಾರ್ಯದರ್ಶಿ ಜಿ. ಉಷಾರಾಣಿ, ಉಪಾಧ್ಯಕ್ಷೆ ತಿಪ್ಪಕ್ಕ, ರಾಧಮ್ಮ, ಸಹ ಕಾರ್ಯದರ್ಶಿ ಜಯಮ್ಮ, ಲಕ್ಷ್ಮೀ ಇದ್ದರು.
ಬಿಸಿಯೂಟ ತಯಾರಕರ ಬಾಕಿ ವೇತನ ಬಿಡುಗಡೆ ಹಾಗೂ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ಫೆಡರೇಷನ್‌ನಿಂದ ಬಿಸಿಯೂಟ ಸಹಾಯಕ ನಿರ್ದೇಶಕ ಕೆ.ಜಿ.ಆಂಜನೇಯ ಮೂಲಕ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕಳೆದ 25 ವರ್ಷಗಳಿಂದ ರಾಜ್ಯದ ಸರ್ಕಾರಿ, ಅನುದಾನಿತ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಿಸಿಯೂಟ ತಯಾರಕರ ಬಾಕಿ ಎರಡು ತಿಂಗಳ ವೇತನ ಕೂಡಲೇ ಬಿಡುಗಡೆ ಮಾಡಬೇಕು. ವಿದ್ಯಾರ್ಥಿಗಳ ಸಂಖ್ಯೆ ಕೊರತೆ ನೆಪದಡಿ ಬಿಸಿಊಟ ತಯಾರಕರನ್ನು ಕೆಲಸದಿಂದ ಬಿಡುಗಡೆಗೊಳಿಸಿದಲ್ಲಿ ಅವರಿಗೆ ಇಡುಗಂಟು ನೀಡಬೇಕು ಅಥವಾ ಪಕ್ಕದ ಶಾಲೆಗೆ ವರ್ಗಾವಣೆ ಮಾಡಬೇಕು. ಕನಿಷ್ಠ ವೇತನ ಜಾರಿಗೊಳಿಸಬೇಕು. ಸ್ಟೀಮ್ ವರ್ಕಸ್ ಬದಲು ಕಾರ್ಮಿಕರೆಂದು ಘೋಷಿಸಬೇಕು. ನಿವೃತ್ತರಿಗೆ 2 ಲಕ್ಷ ರೂ. ಇಡುಗಂಟು ಕೊಡಬೇಕು. ಮೊಟ್ಟೆ ಸುಲಿಯುವ ಭತ್ಯೆಯನ್ನು ಪ್ರತಿ ಮೊಟ್ಟೆಗೆ 1 ರೂ. ನಿಗದಿಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.
ನಿಕಟ ಪೂರ್ವ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ವೀರಣ್ಣ, ಅಕ್ಷರ ದಾಸೋಹ ಬಿಸಿಯೂಟ ಫೆಡರೇಷನ್ ತಾಲೂಕು ಅಧ್ಯಕ್ಷೆ ಜಿ. ಸುಜಾತಾ, ಪ್ರಧಾನ ಕಾರ್ಯದರ್ಶಿ ಜಿ. ಉಷಾರಾಣಿ, ಉಪಾಧ್ಯಕ್ಷೆ ತಿಪ್ಪಕ್ಕ, ರಾಧಮ್ಮ, ಸಹ ಕಾರ್ಯದರ್ಶಿ ಜಯಮ್ಮ, ಲಕ್ಷ್ಮೀ ಇದ್ದರು.