ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಮಾವಿನಗುಣಿ ಸಮೀಪ ವಾಸವಿರುವ ಕುಟುಂಬಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ತಾಲೂಕು ಪಂಚಾಯಿತಿ ಇಒ ವೈ.ಎಚ್.ಚಂದ್ರಶೇಖರ್‌ಗೆ ಸಿಪಿಐದಿಂದ ಮನವಿ ಸಲ್ಲಿಸಲಾಯಿತು. ಸಿಪಿಐ ತಾಲೂಕು ಕಾರ್ಯದರ್ಶಿ ಎಚ್.ಎಂ.ಸಂತೋಷ್, ಜಿಲ್ಲಾ ಕಾರ್ಯದರ್ಶಿ ರಮೇಶ್ ನಾಯ್ಕ, ಬಳಿಗನೂರು ಕೊಟ್ರೇಶ್, ಹಲವಾಗಲು ಮಹೇಂದ್ರಕುಮಾರ್, ಎಚ್.ನೀಲಮ್ಮ, ಭಾಗ್ಯಮ್ಮ ಇತರರಿದ್ದರು. 
ಬಳ್ಳಾರಿ

ಮೂಲ ಸೌಕರ್ಯ ಕಲ್ಪಿಸುವಲ್ಲಿ ನಿರ್ಲಕ್ಷೃ ಸಲ್ಲ

ಶಾಮಸುಂದರ್ ಕೊಪ್ಪಳಕರ್
ಹರಪನಹಳ್ಳಿ: ಹಲವಾಗಲು ಗ್ರಾಮದ ಮಾವಿನಗುಣಿ ಸಮೀಪ ವಾಸವಾಗಿರುವ 30 ಕುಟುಂಬಗಳಿಗೆ ಮೂಲ ಸೌಲಭ್ಯ ಒದಗಿಸಲು ಒತ್ತಾಯಿಸಿ ನಗರದ ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ಸಿಪಿಐ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಸಿಪಿಐ ತಾಲೂಕು ಕಾರ್ಯದರ್ಶಿ ಎಚ್.ಎಂ.ಸಂತೋಷ್ ಮಾತನಾಡಿ. ಈ ಕುಟುಂಬದವರು ಪಂಚಾಯಿತಿ ಖಾತಾ ಪುಸ್ತಕದಲ್ಲಿ ನೋಂದಣಿ ಮಾಡಿಸಿಕೊಂಡು ಮನೆ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ, ವಿದ್ಯುತ್, ಕುಡಿವ ನೀರು, ಬಸ್ ಕೋರಿಕೆ ನಿಲುಗಡೆ ಹಾಗೂ ಇತರ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂದು ದೂರಿದರು.
ಜಿಲ್ಲಾ ಕಾರ್ಯದರ್ಶಿ ರಮೇಶ್ ನಾಯ್ಕ ಮಾತನಾಡಿ, ಈ ಕುಟುಂಬಗಳು ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿರುವ ವಿದ್ಯುತ್ ಮೇನ್ ವೈರ್‌ದಿಂದ ಸಂಪರ್ಕ ಪಡೆದಿದ್ದು ಆತಂಕದಿಂದ ಜೀವನ ಸಾಗಿಸುವಂತಾಗಿದೆ. ಕುಡಿಯುವ ನೀರಿಗಾಗಿ 3ರಿಂದ 4 ಕಿಲೋ ಮೀಟರ್ ದೂರದ ಕುಂಚೂರು. ಹಲವಾಗಲುಗೆ ಹೋಗಬೇಕಾಗಿದೆ. ಮೂಲಸೌಲಭ್ಯ ಒದಗಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.