ನಾಗೇಂದ್ರ ಪ್ರಸಾದ್  
ಬಳ್ಳಾರಿ

ವಾಹನಗಳಿಗೂ ರಾಷ್ಟ್ರಧ್ವಜ ಅಳವಡಿಸಿ

ಪ್ರಮುಖ ಮುಖ್ಯಾಂಶಗಳು

  • ಧ್ವಜಸಂಹಿತೆ
ಬಳ್ಳಾರಿ : ಗಣರಾಜ್ಯೋತ್ಸವದ ಅಂಗವಾಗಿ ವಾಹನಗಳಿಗೆ ಧ್ವಜಸಂಹಿತೆ ಪಾಲಿಸಿಕೊಂಡು, ರಾಷ್ಟ್ರ ಧ್ವಜ ಕಟ್ಟಬಹುದು ಎಂದು ಡಿಸಿ ನಾಗೇಂದ್ರ ಪ್ರಸಾದ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಣರಾಜ್ಯೋತ್ಸವದಲ್ಲಿ ವಾಹನಗಳಿಗೆ ರಾಷ್ಟ್ರ ಧ್ವಜ ಕಟ್ಟಲು ನಿರ್ಬಂಧಿಸಲಾಗಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದೆ. ಆದರೆ, ವಾಹನಗಳಿಗೆ ರಾಷ್ಟ್ರ ಧ್ವಜ ಕಟ್ಟಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಧ್ವಜ ಸಂಹಿತೆ ಪಾಲಿಸದೆ ರಾಷ್ಟ್ರ ಧ್ವಜಕ್ಕೆ ಅವಮಾನವಾಗುವ ರೀತಿಯಲ್ಲಿ ಯಾರೂ ಕೂಡ ರಾಷ್ಟ್ರ ಧ್ವಜ ಬಳಸಬಾರದು. ರಾಷ್ಟ್ರದ ತ್ರಿವರ್ಣ ಧ್ವಜ ಬಳಸುವಲ್ಲಿ, ಧ್ವಜ ಸಂಹಿತೆ ಪಾಲಿಸಿಕೊಂಡು ಹಾಗೂ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ವಾಹನಗಳಿಗೆ ಅಳವಡಿಸಿಕೊಂಡು ಸಾರ್ವಜನಿಕರು ಗಣರಾಜ್ಯೋತ್ಸವ ಸಂಭ್ರಮಿಸಬಹುದಾಗಿದೆ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.
====