ಪ್ರಧಾನಿ ನರೇಂದ್ರ ಮೋದಿ ದಾಖಲೆ ದಿನಗಳ ಆಡಳಿತ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಕೂಡ್ಲಿಗಿ ಬಸವಲಿಂಗೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಮಂಡಲ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಡಲ ಅಧ್ಯಕ್ಷ ಕೆ.ನಾಗರಾಜ ಬಣವಿಕಲ್ಲು, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ದುರುಗೇಶ, ಮಂಡಲ ಪ್ರಧಾನ ಕಾರ್ಯದರ್ಶಿ ಪಿ.ಮಂಜುನಾಥ ನಾಯಕ ಇತರರಿದ್ದರು.  
ಬಳ್ಳಾರಿ

ಮಾದರಿಯಾಗಿದೆ ನರೇಂದ್ರ ಮೋದಿ ಆಡಳಿತ

ರುದ್ರಪ್ಪ ವಾಲಿ
ಕೂಡ್ಲಿಗಿ: ಭಾರತದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಭಾಜನರಾಗಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗರಾಜ ಬಣವಿಕಲ್ಲು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ದಾಖಲೆಯ 4,399 ದಿನಗಳ ಆಡಳಿತಾವಧಿ ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದ ಬಸವಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಬಿಜೆಪಿ ಮಂಡಲದಿಂದ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಮೋದಿ ಅವರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮೀರಿ ಭಾರತದ ಸುದೀರ್ಘ ಅವಧಿಯ ಪ್ರಧಾನಿ ಎನಿಸಿಕೊಂಡಿದ್ದಾರೆ. ಮೋದಿ ಅವರ ನಾಯಕತ್ವ, ಸುಧಾರಣಾವಾದಿ ಆಡಳಿತ ಮತ್ತು ವಿಕಸಿತ ಭಾರತ ದೃಷ್ಟಿಕೋನವನ್ನು ವಿಶ್ವದ ನಾಯಕರು ಶ್ಲಾಘಿಸಿದ್ದಾರೆ. ಮೋದಿ ಅವರ ಸ್ಥಿರ ಆಡಳಿತ, ಜಾಗತಿಕವಾಗಿ ಭಾರತದ ಘನತೆ ಹೆಚ್ಚಿಸುವ ಕಾರ್ಯವೈಖರಿ ಮತ್ತು ಬಡವರ ಕಲ್ಯಾಣಕ್ಕೆ ನೀಡುವ ಆದ್ಯತೆ ಶ್ಲಾಘನೀಯ ಎಂದರು.
ಮಂಡಲ ಕಾರ್ಯಾಲಯ ಕಾರ್ಯದರ್ಶಿ ಎ.ಎಂ.ವಾಗೀಶ ಮೂರ್ತಿ, ಸಾಣೆಹಳ್ಳಿ ಹನುಮಂತಪ್ಪ, ಗುರಿಕಾರ ರಾಘವೇಂದ್ರ, ಭರತ್ ರಾಮ್, ಉಗ್ರಂ ಕಿಟ್ಟಿ, ಅಂಬಾಲಿ ಹನುಮಂತ, ಗುಜ್ಜಲ ಗಣೇಶ, ಬಾಣದ ಶಂಕರ, ಗುರುಸ್ವಾಮಿ, ಕೆ.ಕೆ.ಹಟ್ಟಿ ರಾಜು, ಎ.ಡಿ.ಗುಡ್ಡ ಕರಿಬಸಪ್ಪ, ಸಿ.ಎಸ್.ಪುರ ಮಾರುತಿ, ಸುಧೀಂದ್ರ, ವಿ.ಕೊಟ್ರೇಶ, ಲಕ್ಷ್ಮೀಬಾಯಿ ಕಾಂತರಾಜ, ನಾಗರಾಜ ಇತರರಿದ್ದರು.