ಸಿರಗುಪ್ಪ ತಾಲೂಕಿನ ಶಾಲಿಗನೂರು ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ವಿಜಯಪುರ ಶ್ರೀ ರೇವಣ ಸಿದ್ದೇಶ್ವರ ಶಾಂತಾಶ್ರಮದ ಕೈವಲ್ಯಾನಂದ ಸ್ವಾಮೀಜಿ ಮಾತನಾಡಿದರು. ಪ್ರವಚನಕಾರ ಶಿವಾಚಾರ್ಯ ಸ್ವಾಮೀಜಿ ಹಿರೇಮಠ, ಗಾಯಕ ಚಂದ್ರಶೇಖರ ಗವಾಯಿ, ತಬಲವಾದಕ ರಾಮಲಿಂಗ ಹೂಗಾರ ಇದ್ದರು.
ಸನ್ಮಾರ್ಗದಲ್ಲಿ ನಡೆಯಲು ಪುರಾಣಗಳು ಸಹಕಾರಿ
ಸಿರಗುಪ್ಪ: ಇಂದಿನ ಯಾಂತ್ರಿಕ ಜೀವನದಲ್ಲಿ ಕಲುಷಿತಗೊಂಡಿರುವ ಮನಸ್ಸಿಗೆ ಮತ್ತು ಸದ್ಗುಣ ಬೆಳೆಸಿಕೊಂಡು ಸನ್ಮಾರ್ಗದಲ್ಲಿ ನಡೆಯಲು ಸತ್ಪುರುಷರ ಪುರಾಣ ಹಾಗೂ ಸತ್ಸಂಗಗಳು ಸಹಕಾರಿ ಎಂದು ವಿಜಯಪುರ ಶ್ರೀ ರೇವಣ ಸಿದ್ದೇಶ್ವರ ಶಾಂತಾಶ್ರಮದ ಕೈವಲ್ಯಾನಂದ ಸ್ವಾಮೀಜಿ ಹೇಳಿದರು.
ಶಾಲಿಗನೂರು ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ 11ನೇ ದಿನದ ಕಲಬುರಗಿ ಶರಣ ಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುರುಷ ಪ್ರಧಾನ ಸಮಾಜಕ್ಕೆ ಸ್ತ್ರೀ ದೇವಿ ಸ್ವರೂಪಿಣಿ. ಆದ್ದರಿಂದ ಮಹಿಳೆಯನ್ನು ಗೌರವಿಸುವುದು ಪುರುಷರ ಕರ್ತವ್ಯ. ಮಕ್ಕಳು ಮುಂದೆ ದಾಸ್ಯ ಪದ್ಧತಿಯಲ್ಲಿ ಜೀವಿಸುವುದನ್ನು ತಪ್ಪಿಸಲು ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸಿ. ಮೌಢ್ಯ ಕಡಿವಾಣಕ್ಕೆ ಶಿಕ್ಷಣವೇ ಮದ್ದು ಎಂದರು.
ಪ್ರವಚನಕಾರ ಶಿವಾಚಾರ್ಯ ಸ್ವಾಮೀಜಿ ಹಿರೇಮಠ, ಗಾಯಕ ಚಂದ್ರಶೇಖರ ಗವಾಯಿ, ತಬಲವಾದಕ ರಾಮಲಿಂಗ ಹೂಗಾರ,ಪ್ರಮುಖರಾದ ವೀರೇಶಯ್ಯ ತಾತ, ದೊಡ್ಡನಗೌಡ ವಕೀಲರು, ಬಿಂದಿಗಿ ವೀರನಗೌಡ, ಎಸ್.ಬಿ.ಗುರುರಾಜಗೌಡ, ರವಿಗೌಡ, ಬಸಪ್ಪ ಇತರರಿದ್ದರು.