ಹಗರಿಬೊಮ್ಮನಹಳ್ಳಿಯಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ಸಂಸ್ಮರಣೋತ್ಸವದಲ್ಲಿ ಶಾಸಕ ಕೆ.ನೇಮಿರಾಜ್‌ನಾಯ್ಕ ಮಾತನಾಡಿದರು. ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಕೃಷಿಕ ಸಮಾಜದ ತಾಲೂಕು ನಿರ್ದೇಶಕ ಜಿ.ಮಂಜುನಾಥ, ರಂಗಭೂಮಿ ಕಲಾವಿದೆ ನಾಗರತ್ನಮ್ಮ ಇತರರಿದ್ದರು. 
ಬಳ್ಳಾರಿ

ಅಂಧ ಮಕ್ಕಳಿಗೆ ಸಂಗೀತ ಧಾರೆ ಎರೆದ ಗವಾಯಿಗಳು

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಶಾಸಕ ನೇಮಿರಾಜ್ ನಾಯ್ಕ ಅಭಿಮತ
  • ಹಗರಿಬೊಮ್ಮನಹಳ್ಳಿ ಪುಟ್ಟರಾಜ ಗವಾಯಿಗಳ ಸಂಸ್ಮರಣೋತ್ಸವ
ಹಗರಿಬೊಮ್ಮನಹಳ್ಳಿ: ಸಂಗೀತಕ್ಕೆ ಅಪಾರವಾದ ಶಕ್ತಿ ಇದ್ದು, ಈ ಕಲೆಯನ್ನು ಯಾರೂ ಕಸಿದುಕೊಳ್ಳಲಾರರು ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಅಭಿಪ್ರಾಯಪಟ್ಟರು.
ಪಟ್ಟಣದ ನೀರಾವರಿ ಇಲಾಖೆ ಕಚೇರಿ ಆವರಣದಲ್ಲಿ ನವೀನ್ ಸ್ಪೋರ್ಟ್ಸ್ ಕ್ಲಬ್‌ನಿಂದ ಆಯೋಜಿಸಿದ್ದ ಪಂಡಿತ ಪುಟ್ಟರಾಜ ಗವಾಯಿಗಳ ಸಂಸ್ಮರಣೋತ್ಸವದಲ್ಲಿ ಮಾತನಾಡಿದರು. ಪುಟ್ಟರಾಜ ಗವಾಯಿಗಳು ಸಂಗೀತ ಸುಧೆಯನ್ನು ನಾಡಿನ ಅನೇಕ ಅಂಧ ಮಕ್ಕಳಿಗೆ ಧಾರೆ ಎರೆದರು. ಪುಟ್ಟರಾಜ ಗವಾಯಿಗಳಿಂದ ಸಂಗೀತ ಕಲಿತ ಅನೇಕ ಮಕ್ಕಳು ಬದುಕು ರೂಪಿಸಿಕೊಂಡಿದ್ದಾರೆ ಎಂದರು.
ರಂಗಭೂಮಿ ಕಲಾವಿದೆ ನಾಗರತ್ನಮ್ಮ ಮಾತನಾಡಿ, ಕರ್ನಾಟಕದಲ್ಲಿ ಸಂಗೀತ ಕಲಾವಿದರನ್ನು ಬೆಳೆಸಿದ ಕೀರ್ತಿ ಪುಟ್ಟರಾಜ ಗವಾಯಿಗಳಿಗೆ ಸಲ್ಲುತ್ತದೆ. ಹಾಗೆಯೇ ಎಲ್ಲರೂ ರಂಗಭೂಮಿ ಕಲೆಯನ್ನು ಪೋಷಿಸಬೇಕು ಎಂದರು.
ನವೀನ್ ಸ್ಪೋರ್ಟ್ಸ್ ಕ್ಲಬ್ ಕಾರ್ಯಾಧ್ಯಕ್ಷ, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಈ.ಕೃಷ್ಣಮೂರ್ತಿ ಪುಟ್ಟರಾಜ ಗವಾಯಿಗಳ ಹೆಸರಲ್ಲಿ ಪಟ್ಟಣದ ಸಕ್ರಿಹಳ್ಳಿ ಮಾರ್ಗದಲ್ಲಿ ಸಂಗೀತ ಪಾಠಶಾಲೆಗೆ ಜಾಗ ಕೊಡುವುದಾಗಿ ತಿಳಿಸಿದರು. ಶಾಸಕ ಕೆ.ನೇಮಿರಾಜ್‌ನಾಯ್ಕ ಪಾಠಶಾಲೆಗೆ ಅನುದಾನ ನೀಡುವ ಭರವಸೆ ನೀಡಿದರು. ಸ್ಥಳೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಕೃಷಿಕ ಸಮಾಜದ ತಾಲೂಕು ನಿರ್ದೇಶಕ ಜಿ.ಮಂಜುನಾಥ, ಹಿರಿಯ ಸಾಹಿತಿ ಮೇಟಿ ಕೊಟ್ರಪ್ಪ, ನವೀನ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾದ ಕಿನ್ನಾಳ್ ಸುಭಾಷ್, ಪೆಟಿಗಿ ವೆಂಕಟೇಶ್, ಗಿಣಿಗೇರಿ ದೇವರಾಜ್ ಗವಾಯಿ, ಚಿತ್ತವಾಡ್ಗಿ ಪ್ರಕಾಶ, ಎಚ್.ಎಂ.ನಾಗರಾಜ, ಬಿ.ಕುಮಾರ್, ಹೋಟೆಲ್ ಸಿದ್ಧರಾಜ, ಕೇದಾರ್ ಅಅಅಅಸ್ವಾಮಿ, ಸಂಗೀತ ಶಿಕ್ಷಕಿ ಶಾರದಾ ಮಂಜುನಾಥ್, ನಿವೃತ್ತ ಶಿಕ್ಷಕರಾದ ಮಲ್ಲೇಶಪ್ಪ, ರಮೇಶ್ ಪತ್ತಾರ್ ಇತರರಿದ್ದರು.