ಹೂವಿನಹಡಗಲಿ ತಾಲೂಕಿನ ಪುರ ಗ್ರಾಮದ ಕಟ್ಟಿಮನಿ ಮಠದಲ್ಲಿ 138ನೇ ಮಾಸಿಕ ಧರ್ಮ ಸಭೆಯನ್ನು ಹಂಪಸಾಗರದ ನವಲಿ ಕಟ್ಟಿಮನಿ ಮಠದ ಅಭಿನವ ಶ್ರೀ ಶಿವಲಿಂಗ ರುದ್ರಮುನಿ ಸ್ವಾಮೀಜಿ ಉದ್ಘಾಟಿಸಿದರು. ನಿವೃತ್ತ ಉಪನ್ಯಾಸಕ ಎಂ.ಗಂಗಪ್ಪ, ನಿವೃತ್ತ ಮುಖ್ಯಶಿಕ್ಷಕ ಎಂ.ಪಿ.ಎಂ.ಕೊಟ್ರಯ್ಯ, ಪ್ರಮುಖರಾದ ಎ.ಎಂ.ಹಾಲಯ್ಯಶಾಸ್ತ್ರಿ, ಪಿ.ಕೆ.ಎಂ.ವಿಶ್ವನಾಥ ಸ್ವಾಮಿ ಇತರರಿದ್ದರು. 
ಬಳ್ಳಾರಿ

ಕ್ಷೀಣಿಸುತ್ತಿವೆ ನೈತಿಕ ಮೌಲ್ಯಗಳು

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಅಭಿನವ ಶಿವಲಿಂಗ ರುದ್ರಮುನಿ ಸ್ವಾಮೀಜಿ ಕಳವಳ
  • ಹೂವಿನಹಗಡಲಿ ಪುರ ಮಾಸಿಕ ಧರ್ಮಸಭೆ
ಹೂವಿನಹಗಡಲಿ: ಪಾಲನೆ, ಶಿಸ್ತು, ಶುದ್ಧತೆಯೊಂದಿಗೆ ಜೀವನ ಸಾರ್ಥಕಗೊಳಿಸಿಕೊಳ್ಳಬೇಕೆಂದು ಹಂಪಸಾಗರ ನವಲಿ ಕಟ್ಟಿಮನಿ ಮಠದ ಅಭಿನವ ಶ್ರೀ ಶಿವಲಿಂಗ ರುದ್ರಮುನಿ ಸ್ವಾಮೀಜಿ ಹೇಳಿದರು.
ಪುರ ಗ್ರಾಮದ ಕಟ್ಟಿಮನಿ ಮಠದಲ್ಲಿ ಭಾನುವಾರ ಆಯೋಜಿಸಿದ್ದ 138ನೇ ಮಾಸಿಕ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಮನುಷ್ಯರಲ್ಲಿ ನೈತಿಕ ಮೌಲ್ಯಗಳು ಕ್ಷೀಣಿಸುತ್ತಿವೆ. ಯುವಜನತೆ ಬದುಕಿನ ಸ್ವಾರಸ್ಯವನ್ನು ಬಿಟ್ಟು ಅನ್ಯ ಆಲೋಚನೆಗಳ ಕಡೆಗೆ ಗಮನಹರಿಸುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಂಸ್ಕಾರವನ್ನು ಕಲಿಸುವುದು ಪಾಲಕರ ಜವಾಬ್ದಾರಿಯಾಗಿದೆ ಎಂದರು.
ನಿವೃತ್ತ ಉಪನ್ಯಾಸಕರಾದ ಎಂ.ಗಂಗಪ್ಪ, ನಿವೃತ್ತ ಮುಖ್ಯಶಿಕ್ಷಕ ಎಂ.ಪಿ.ಎಂ.ಕೊಟ್ರಯ್ಯ, ಪ್ರಮುಖರಾದ ಎ.ಎಂ.ಹಾಲಯ್ಯಶಾಸ್ತ್ರಿ, ಪಿ.ಕೆ.ಎಂ.ವಿಶ್ವನಾಥ ಸ್ವಾಮಿ, ಎನ್.ಸುಧಾಕರ, ಮೇಘರಾಜ್ ನಾಯ್ಕ, ದ್ವಾರಕೀಶಗೌಡ್ರು, ಶರಣಯ್ಯ, ಚಂದ್ರಶೇಖರ ಶಾಸ್ತ್ರಿ, ಶಂಕರ ಸ್ವಾಮಿ ಇತರರಿದ್ದರು.