ಜೈಲು ಅವರಣಕ್ಕೆ ಮೊಬೈಲ್, ದೂರು ದಾಖಲು
ಬಳ್ಳಾರಿ : ನಗರದ ಕೇಂದ್ರ ಕಾರಾಗೃಹದ ಆವರಣದೊಳಗೆ ಮೊಬೈಲ್ ಎಸೆದ ಪ್ರಕರಣದ ಸಂಬಂಧ ಮೂವರು ಕೈದಿಗಳು ಹಾಗೂ ಒಬ್ಬ ಅಪರಿಚಿತ ವ್ಯಕ್ತಿ ವಿರುದ್ಧ ಬ್ರೂಸ್‌ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೈದಿಗಳಾದ ಹಳ್ಳೇಶ, ಸಲ್ಮಾನ್, ರವಿ ಹಾಗೂ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಏ.20ರಂದು ಮಧ್ಯಾಹ್ನ ಕಾರಾಗೃಹದ ಗೋಡೆಯ ಮೇಲಿಂದ ಪ್ಲಾಸ್ಟಿಕ್ ಪ್ಯಾಕೆಟ್ ಎಸೆದಿದ್ದು, ಅದನ್ನು ಕೈದಿಗಳು ತೆಗೆದುಕೊಂಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಕೈದಿಯೊಬ್ಬರಿಂದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.