ಭರತ್‌ರೆಡ್ಡಿ  
ಬಳ್ಳಾರಿ

ಭಾರತಕ್ಕೆ ತಲುಪಿದ ಶಾಸಕ ಭರತ್‌ರೆಡ್ಡಿ

ಪ್ರಮುಖ ಮುಖ್ಯಾಂಶಗಳು

  • ಭಾರತ
ಬಳ್ಳಾರಿ : ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಹಿನ್ನೆಲೆ ದುಬೈನಲ್ಲೇ ಸಿಲುಕಿದ್ದ ಬಳ್ಳಾರಿ ನಗರ ಶಾಸಕ ನಾರಾ ಭರತ್‌ರೆಡ್ಡಿ ಅವರು ಮಂಗಳವಾರ ಸುರಕ್ಷಿತವಾಗಿ ಭಾರತಕ್ಕೆ ತಲುಪಿದ್ದಾರೆ.
ಶಾಸಕ ಭರತ್‌ರೆಡ್ಡಿ ಅವರು ಕುಟುಂಬ ಸಮೇತ ಕಳೆದ ವಾರ ದುಬೈಗೆ ಪ್ರವಾಸಕ್ಕೆ ತೆರಳಿದ್ದರು. ಇರಾನ್-ಇಸ್ರೇಲ್ ನಡುವೆ ಯುದ್ಧ ಆರಂಭವಾದ ಹಿನ್ನೆಯಲ್ಲಿ ದುಬೈನಲ್ಲಿ ವಿಮಾನಯಾನವನ್ನು ಬಂದ್ ಮಾಡಲಾಗಿದ್ದ ಪರಿಣಾಮ ಎರಡ್ಮೂರು ದಿನಗಳ ಕಾಲ ದುಬೈನಲ್ಲೇ ಸಿಲುಕಬೇಕಾಯಿತು. ಭಾರತಕ್ಕೆ ವಾಪಸ್ಸಾಗಲು ಕಳೆದ ಎರಡು ದಿನಗಳಿಂದ ಪರದಾಡಿದ್ದರು. ಮಾ.2 ರಂದು ವಿಡಿಯೋ ಸಂದೇಶ ಕಳುಹಿಸುವ ಮೂಲಕ ತಾವು ಸುರಕ್ಷಿತವಾಗಿದ್ದೇವೆ ಎಂಬ ಮಾಹಿತಿ ನೀಡಿದ್ದರು. ಕೊನೆಗೆ ಒಮನ್ ದೇಶದ ಮೂಲಕ ದೆಹಲಿಗೆ ಆಗಮಿಸಿದ್ದು, ಮಾ.4 ರಂದು ಬುಧವಾರ ಬಳ್ಳಾರಿಗೆ ಬರಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಇನ್ನೂ ದುಬೈನಲ್ಲಿ ಸಿಲುಕಿರುವ ಬಳ್ಳಾರಿಯ 35 ನಿವಾಸಿಗಳು ಮಂಗಳವಾರ ರಾತ್ರಿ ದುಬೈನಿಂದ ಭಾರತಕ್ಕೆ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ.