ಸಂಡೂರಿನ ನಾರಿಹಳ್ಳ ಜಲಾಶಯದ ಬಳಿ ಲಾರಿಗಳೆರಡು ತುಂಡಾಗಿ ಬಿದ್ದಿರುವುದು.
- ವೇಗದ ನಿಯಂತ್ರಣ ತಪ್ಪಿದ ಎರಡು ಲಾರಿಗಳು ಡಿಕ್ಕಿ
- ಚಾಲಕರ ನಿರ್ಲಕ್ಷೃವೇ ಅಪಘಾತಕ್ಕೆ ಕಾರಣ
ಬಳ್ಳಾರಿ : ಚಾಲಕನ ನಿಯಂತ್ರಣ ತಪ್ಪಿ ಎರಡು ಮೈನ್ಸ್ ಲಾರಿಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಲಾರಿಗಳೆರಡು ತುಂಡಾಗಿ ಬಿದ್ದಿರುವ ಘಟನೆ ಸಂಡೂರಿನ ನಾರಿಹಳ್ಳ ಜಲಾಶಯ ಬಳಿ ಶುಕ್ರವಾರ ನಡೆದಿದೆ.
ವೇಗದ ನಿಯಂತ್ರಣ ತಪ್ಪಿದ ಎರಡು ಲಾರಿಗಳು ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ ಎರಡು ಲಾರಿಗಳ ಚಾಲಕರು ಗಂಭೀರವಾಗಿ ಗಾಯಗೊಂಡಿದ್ದು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಚಾಲಕರ ನಿರ್ಲಕ್ಷೃವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವಾಹನದ ಬಿಡಿ ಭಾಗಗಳು ರಸ್ತೆಯೂದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದ ಪರಿಣಾಮ ಟ್ರಾಫಿಕ್ ಜಾಮ್‌ಯಾಗಿತ್ತು. ಈ ಕುರಿತು ಸಂಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.