ನರೇಗಾ ಯೋಜನೆಯಡಿ ನಿರಂತರ ಕೆಲಸ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಚಿರಿಬಿಯಲ್ಲಿ ತಾಪಂ ಇಒ ಡಾ.ಆನಂದ ಕುಮಾರಗೆ ಮನವಿ ಸಲ್ಲಿಸಲಾಯಿತು. ಸಂಘಟನೆ ಜಿಲ್ಲಾ ಸಂಚಾಲಕಿ ಅಕ್ಕಮಹಾದೇವಿ, ತಾಲೂಕು ಸಂಚಾಲಕಿ ನೇತ್ರಾ, ಪ್ರಮುಖರಾದ ಮಲ್ಲೇಶ ಕೋಗಳಿ, ಮೂಗಣ್ಣ ಇತರರಿದ್ದರು. 
ಬಳ್ಳಾರಿ

ನರೇಗಾ ಕೆಲಸ ನಿರಂತರ ನೀಡದೆ ಅನ್ಯಾಯ

ಪ್ರಮುಖ ಮುಖ್ಯಾಂಶಗಳು

  • ಕಾರ್ಮಿಕ ಸಂಘಟನೆ ತಾಲೂಕು ಸಂಚಾಲಕಿ ನೇತ್ರಾವತಿ ದೂರು
  • ಕೊಟ್ಟೂರು ಕೂಲಿ ಕಾರ್ಮಿಕ ಸಂಘಟನೆ ಪ್ರತಿಭಟನೆ
ಕೊಟ್ಟೂರು: ನರೇಗಾ ಕೆಲಸವು ಗ್ರಾಮೀಣ ಕೂಲಿ ಕಾರ್ಮಿಕರ ಜೀವನ ನಿರ್ವಹಣೆಗೆ ಆಶ್ರಯವಾಗಿದ್ದು, ಪಿಡಿಒ ನಿರಂತರ ಕೆಲಸ ಕೊಡದ ಕಾರಣ ಕೂಲಿಕಾರರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ತಾಲೂಕು ಸಂಚಾಲಕಿ ನೇತ್ರಾವತಿ ದೂರಿದರು.
ಚಿರಿಬಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರಂತರ ಕೆಲಸ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಗ್ರಾಪಂ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಸಾರ್ವಜನಿಕರು ಹಾಗೂ ಕೂಲಿ ಕಾರ್ಮಿಕರು ಉದ್ಯೋಗ, ಕಚೇರಿ ಕೆಲಸದ ವಿಚಾರಕ್ಕೆ ಪಿಡಿಒಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ ಎಂದು ಆರೋಪಿಸಿದರು.
ಕಾರ್ಮಿಕರ ಸಂಘಟನೆ ಜಿಲ್ಲಾ ಸಂಚಾಲಕಿ ಅಕ್ಕಮಹಾದೇವಿ ಮಾತನಾಡಿ, ಕೂಲಿ ಕಾರ್ಮಿಕರ ಓಣಿಗಳಿಗೆ ಸಮರ್ಪಕವಾಗಿ ನೀರು ಬಿಡುವುದು, ವಸತಿ ಮತ್ತು ನಿವೇಶನ ರಹಿತ ಅರ್ಹ ಕುಟುಂಬಕ್ಕೆ ನಿವೇಶನ ನೀಡುವಂತೆ ಒತ್ತಾಯಿಸಿದರು.
ಕೂಲಿ ಕಾರ್ಮಿಕರಾದ ಮೂಗಣ್ಣ, ನಾಗರಾಜ, ತಿರುಪಣ್ಣ, ಹನುಮಂತಣ್ಣ, ಕೊಟ್ರೇಶ್, ಸಿದ್ದೇಶ್, ನಾಗವೇಣಿ, ಚೆನ್ನಮ್ಮ, ಮರಿಯಮ್ಮ, ಬಿ.ನಿರ್ಮಲಾ, ಕೆಂಚಮ್ಮ, ಹುಚ್ಚಂಗೆಮ್ಮ, ಶಾರದಮ್ಮ ಮರಬ್ಬಿಹಾಳ್, ಮಲ್ಲೇಶ್ ಕೋಗಳಿ ಇದ್ದರು.
"

ನರೇಗಾದಡಿ ಕೂಲಿಕಾರರಿಗೆ ಹೆಚ್ಚಿನ ಕೆಲಸ ನೀಡಿರುವ ತಾಲೂಕಿನ ಗ್ರಾಪಂಗಳ ಪೈಕಿ ಚಿರಿಬಿ ಮೊದಲ ಸ್ಥಾನದಲ್ಲಿದೆ. ವಸತಿ ಯೋಜನೆಯಡಿ ಮನೆಗಳಿಗೆ ಅರ್ಜಿ ಸಲ್ಲಿಸಲು ಜೂ.30ರವರೆಗೆ ಅವಕಾಶವಿದೆ. ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಮನೆ ನೀಡಲಾಗುವುದು.

— > ಮಾಧವಿ ಕೆ.ವೈ. ಪಿಡಿಒ, ಚಿರಿಬಿ, ಗ್ರಾಪಂ