ಕೊಟ್ಟೂರು ತಾಲೂಕು ಕಚೇರಿಯಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಜಿ.ಕೆ.ಅಮರೇಶ್, ತಾಲೂಕು ದಿಗಂಬರ ಜೈನ ಸಂಘದ ಅಧ್ಯಕ್ಷ ಬ್ರಹ್ಮೇಶ್ ಕುಮಾರ್, ಕಂದಾಯ ನಿರೀಕ್ಷಕ ಡಿ.ಶಿವಕುಮಾರ, ಭೂಮಾಪಕ ಭರಮಪ್ಪ, ಗ್ರಾಮ ಲೆಕ್ಕಿಗ ಹರೀಶ್ ಇತರರಿದ್ದರು.
ಕೊಟ್ಟೂರು: ಜಗತ್ತು ಪ್ರಸ್ತುತ ಯುದ್ಧ ಭೀತಿಯಲ್ಲಿದ್ದು, ಭಗವಾನ್ ಮಹಾವೀರ ಅವರ ಅಹಿಂಸೆ ಮತ್ತು ಶಾಂತಿ ಸಂದೇಶ ಪಾಲಿಸಬೇಕು ಎಂದು ತಹಸೀಲ್ದಾರ್ ಜಿ.ಕೆ.ಅಮರೇಶ್ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾವೀರ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅಹಿಂಸೆ ಮಾರ್ಗದ ಮೂಲಕ ಸಂದೇಶ ನೀಡಿದ್ದಾರೆ ಎಂದರು. ಶಿಕ್ಷಕ ಕೊಟ್ರೇಶ ಮಾತನಾಡಿ, ಭಗವಾನ್ ಮಹಾವೀರ ಒಳ್ಳೆಯ ಚಿಂತನೆ, ಒಳ್ಳೆಯ ಜ್ಞಾನ, ಒಳ್ಳೆಯ ನಡವಳಿಕೆ ಎನ್ನುವ 3 ರತ್ನಗಳನ್ನು ಬೋಧಿಸಿದ್ದಾರೆ ಎಂದು ತಿಳಿಸಿದರು.
ಭೂದಾಖಲೆಗಳ ಸಹಾಯಕ ನಿರ್ದೇಶಕ ಸುರೇಶ ಚಿನಮನಹಳ್ಳಿ, ತಾಲೂಕು ದಿಗಂಬರ ಜೈನ್ ಸಂಘದ ಅಧ್ಯಕ್ಷ ಬ್ರಹ್ಮೇಶ್ ಕುಮಾರ್, ನೌಕರರ ಸಂಘದ ತಾಲೂಕು ಅಧ್ಯಕ್ಷ ಯೋಗೇಶ್ವರ ದಿನ್ನೆ, ಕಂದಾಯ ನಿರೀಕ್ಷಕ ಡಿ.ಶಿವಕುಮಾರ, ಭೂಮಾಪಕ ಭರಮಪ್ಪ, ಗ್ರಾಮ ಲೆಕ್ಕಿಗ ಹರೀಶ್, ಪ್ರಮುಖರಾದ ಕೊಟ್ರಪ್ಪ ಜೈನ್, ಕಿರಣ್ ಕುಮಾರ್ ಜೈನ್, ಪ್ರದೀಪ್ ಕುಮಾರ್ ಜೈನ್ ಇತರರಿದ್ದರು.