ಕಾನಹೊಸಹಳ್ಳಿ ಸಮೀಪದ ಕಾನಮಡಗು ಗ್ರಾಮದಲ್ಲಿ ಶ್ರೀ ಕಂಚೋಬಳೇಶ್ವರ ಸ್ವಾಮಿ ದೇವಸ್ಥಾನ ಗೋಪುರ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆಯಿತು. ಶಾಸಕ ಡಾ.ಎನ್.ಟಿ.ಶ್ರೀನಿವಾಸ, ಶ್ರೀ ಪ್ರಶಾಂತಸಾಗರ ಸ್ವಾಮೀಜಿ, ಕಾನಮಡುಗು ದಾಸೋಹ ಮಠದ ದಾ.ಮ.ಐಮುಡಿ ಶರಣರು, ಶ್ರೀಓಂಕಾರೇಶ್ವರ ಸ್ವಾಮೀಜಿ, ಶ್ರೀಕೇದಾರಲಿಂಗ ಶಿವಾಚಾರ್ಯರು, ಯೋಗಿರಾಜೇಂದ್ರ ಸ್ವಾಮೀಜಿ, ರಘುಮೂರ್ತಿ ಇತರರಿದ್ದರು. 
ಬಳ್ಳಾರಿ

ಹಬ್ಬಹರಿದಿನಗಳಿಂದ ಮಾನಸಿಕ ನೆಮ್ಮದಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಗಡಿಭಾಗದ
  • ಹಳ್ಳಿ
  • ವಿಶಿಷ್ಟ
ಕಾನಹೊಸಹಳ್ಳಿ: ಹಬ್ಬ ಹರಿದಿನಗಳಲ್ಲಿ ಧಾರ್ಮಿಕ ಉತ್ಸವಗಳು ನಡೆಯುವುದರಿಂದ ಸಂಬಂಧಗಳು ಗಟ್ಟಿಗೊಳ್ಳುವುದಲ್ಲದೆ, ಜಾತಿಭೇದ ಮರೆತು ಎಲ್ಲರೂ ಸೇರುವ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಸಮೀಪದ ಕಾನಮಡಗು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಕಂಚೋಬಳೇಶ್ವರ ಸ್ವಾಮಿಯ ಗೋಪುರ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಧರ್ಮಸಭೆಯಲ್ಲಿ ಮಾತನಾಡಿದರು.
ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಶ್ರದ್ಧಾಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಕ್ಷೇತ್ರದ ಜನರೊಂದಿಗೆ ಭಾವನಾತ್ಮಕ ಸಂಬಂಧಗಳು ಗಟ್ಟಿಯಾಗಿ ಮಾನಸಿಕ ನೆಮ್ಮದಿ ಸಿಗಲಿದೆ ಎಂದರು. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಕೂಡ್ಲಿಗಿ ತಾಲೂಕಿನ ಗಡಿಭಾಗದ ಹಳ್ಳಿ ವಿಶಿಷ್ಟ ಮತ್ತು ವೈವಿದ್ಯಮಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಿಂತನೆಗಳು ಒಂದುಗೂಡಿವೆ ಎಂದು ತಿಳಿಸಿದರು.
ಮುಷ್ಟೂರಿನ ಓಂಕಾರೇಶ್ವರ ಸ್ವಾಮೀಜಿ, ಚನ್ನಗಿರಿಯ ಕೇದಾರಲಿಂಗ ಸ್ವಾಮೀಜಿ, ಕೊಟ್ಟೂರಿನ ಯೋಗಿ ರಾಜೇಂದ್ರ ಶಿವಾಚಾರ್ಯರು, ಜಿಪಂ ಮಾಜಿ ಸದಸ್ಯೆ ಮೀನಾಕ್ಷಮ್ಮ ಶರಣಪ್ಪ, ನಿವೃತ್ತ ಇಂಜಿನಿಯರ್ ಶರಣಪ್ಪ, ಪ್ರಮುಖರಾದ ತಳವಾರ ಶರಣಪ್ಪ, ಹನುಮಂತಪ್ಪ, ಮಹಂತೇಶ, ಹುಡೇಂ ಪಾಪನಾಯಕ ಇತರರಿದ್ದರು.