ಕೊಟ್ಟೂರಿನ ಮರಡಿ ದುಗಾರ್ಂಬಿಕಾ ದೇವಸ್ಥಾನದ ಆವರಣದಲ್ಲಿ ಮದ್ಯಪಾನಮುಕ್ತರಾದ ನವಜೀವನ ಸದಸ್ಯರ ಸಮಾವೇಶವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪಳ ವಿಭಾಗದ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ್ ಉದ್ಘಾಟಿಸಿದರು. ಪ್ರಮುಖರಾದ ನಾಗೇಶ್ ವೈ.ಎ., ಮಲ್ಲಿಕಾರ್ಜುನ್, ವೆಂಕಟೇಶ, ನವೀನಕುಮಾರ್ ಇದ್ದರು.
- ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ್ ಸಲಹೆ
- ಕೊಟ್ಟೂರು ಮದ್ಯಪಾನಮುಕ್ತ ನವಜೀವನ ಸದಸ್ಯರ ಸಮಾವೇಶ
ಕೊಟ್ಟೂರು: ಭಾರತದಲ್ಲಿ ಎಲ್ಲ ರೀತಿಯ ಸಭೆ, ಸಮಾರಂಭಗಳು ನಡೆಯುತ್ತವೆ. ಆದರೆ, ನವಜೀವನ ಸದಸ್ಯರ ಸಭೆ, ಸಮಾರಂಭವನ್ನು ಆಯೋಜಿಸುವ ಏಕೈಕ ವ್ಯಕ್ತಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರಾಗಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪಳ ವಿಭಾಗದ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ್ ಹೇಳಿದರು.
ಪಟ್ಟಣದ ಬಿಕ್ಕಿಮರಡಿ ದುಗಾರ್ಂಬಿಕಾ ದೇವಸ್ಥಾನದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಮದ್ಯಪಾನಮುಕ್ತ ನವಜೀವನ ಸದಸ್ಯರ ಸಮಾವೇಶದಲ್ಲಿ ಮಾತನಾಡಿದರು. ಈ ರೀತಿಯ ಸಭೆಗಳಲ್ಲಿ ನವಜೀವನ ಸಮಿತಿ ಸದಸ್ಯರು ಹೆಚ್ಚು ಪಾಲ್ಗೊಂಡು, ಮನಃಶಾಂತಿಗಾಗಿ ದೇವರ ಧ್ಯಾನ ಮಾಡುವಂತಾಗಬೇಕು. ಮದ್ಯಪಾನ ತ್ಯಜಿಸಿದವರು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿದ್ದಾರೆ. ಜನಜಾಗೃತಿ ಕೆಲಸ ಎಂದರೆ ದೇವರು ಒಪ್ಪುವ ಕೆಲಸವಾಗಿದೆ ಎಂದು ತಿಳಿಸಿದರು.
ನವಜೀವನ ಸಮಿತಿ ಸದಸ್ಯರಿಗೆ ಆಟೋಟ ಸ್ಪರ್ಧೆ, ಭಜನೆ ಮತ್ತು ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು. ನವಜೀವನ ಸಮಿತಿ ಸದಸ್ಯರು ಮದ್ಯಪಾನ ಬಿಟ್ಟ ಮೇಲೆ ಆರ್ಥಿಕ, ಸಾಮಾಜಿಕವಾಗಿ ಹಾಗೂ ಕುಟುಂಬದಲ್ಲಿ ಸ್ಥಾನಮಾನಗಳ ಬಗ್ಗೆ ಅನಿಸಿಕೆ ಹಂಚಿಕೊಂಡರು.
ಕೊಪ್ಪಳ ಪ್ರಾದೇಶಿಕ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ನಾಗೇಶ್ ವೈ.ಎ., ಸದಸ್ಯರಾದ ಮಲ್ಲಿಕಾರ್ಜುನಪ್ಪ, ಮಲ್ಲಿಕಾರ್ಜುನ್ ಎಂ., ನೇತ್ರಾವತಿ, ಶಿವನಗೌಡ ಸಂಡೂರು, ರಮೇಶ್ ಕತ್ತಿಗೆ, ಕೊಟ್ಟೂರು ಯೋಜನಾಧಿಕಾರಿ ನವೀನ ಕುಮಾರ್, ಅರೋಗ್ಯ ಕಾರ್ಯಕರ್ತ ವೆಂಕಟೇಶ, ಮೇಲ್ವಿಚಾರಕ ಸಚಿನ್, ಕೃಷಿ ಮೇಲ್ವಿಚಾರಕ ಮಹಾಂತೇಶ್, ಸೇವಾ ಪ್ರತಿನಿಧಿಗಳು ಇತರರಿದ್ದರು.