ಬಳ್ಳಾರಿಯ ಅಂಜನೇಯ ದೇವಸ್ಥಾನದಲ್ಲಿ ಮಾಂಸದ ತುಂಡುಗಳ ಚೀಲ ಪತ್ತೆಯಾಗಿದೆ.
ಬಳ್ಳಾರಿ : ಇಲ್ಲಿನ ನಾಗಲಕೆರೆಯಲ್ಲಿನ ಅಂಜನೇಯ ದೇವಸ್ಥಾನದಲ್ಲಿ ಮಾಂಸದ ತುಂಡುಗಳ ಚೀಲ ಪತ್ತೆಯಾಗಿರುವ ಘಟನೆ ಶುಕ್ರವಾರ ನಡೆದಿದೆ. ದೇಗುಲದ ಅರ್ಚಕ ಮಹೇಶ ಬೆಳಗಿನ ಜಾವ ಪೂಜೆ ಸಲ್ಲಿಸಲು ದೇವಸ್ಥಾನದ ಬಾಗಿಲು ತೆರೆದ ವೇಳೆ ಮಾಂಸದ ತುಂಡುಗಳ ಚೀಲ ಪತ್ತೆಯಾಗಿರುವುದು ಕಂಡು ಆಶ್ಚರ್ಯಗೊಂಡು ಪೊಲೀಸರಿಗೆ ತಿಳಿಸಿದ್ದಾರೆ. ಕಿಡಿಗೇಡಿ ಅಥವಾ ನಾಯಿಗಳು ತಂದು ಎಸದಿರುವುದು ಎಂಬುದಾಗಿ ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಐಜಿಪಿ ಡಾ.ಹರ್ಷ ಭೇಟಿ ನೀಡಿ ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಇದರ ಬಗ್ಗೆ ತನಿಖೆಯ ನಡೆಯುತ್ತಿದ್ದು, ಸತ್ಯಾಸತ್ಯತೆ ತಿಳಿಯದೆ ಪ್ರಕರಣ ವೈಭವಿಕರಿಸುವುದು ಬೇಡ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಲಬಜಾರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಾರದರ್ಶಕತೆ ಮೂಲಕ ತನಿಖೆ ನಡೆಸಿ ವರದಿ ನೀಡಲಾಗುವುದು. ತಪ್ಪಿಸ್ಥರೆ ಯಾರೇ ಇದ್ದರೂ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಪ್ರಕರಣ ಸಂಬಂಧ ದೇವಸ್ಥಾನ ಹಾಗೂ ನಗರದಲ್ಲಿ ಪೊಲೀಸ್ ಬಂದೂಬಸ್ತ್ ವಹಿಸಲಾಗಿತ್ತು.