ಹರಪನಹಳ್ಳಿ ತಾಲೂಕಿನ ಹಲುವಾಗಲು ಗ್ರಾಮದ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ೨೦೦೮ ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಶಿಕ್ಷಕ ಎಸ್.ಬಸವರಾಜಪ್ಪ ಉದ್ಘಾಟಿಸಿದರು. ಶಿಕ್ಷಕರಾದ ಎಚ್.ಎಂ.ಗೀತಾ, ಶಕುಂತಲಮ್ಮ, ಶಿವಾನಂದಪ್ಪ ಇದ್ದರು.
- ಕಷ್ಟದಲ್ಲಿರುವ
- ಸ್ನೇಹಿತರಿಗೆ
- ಸಹಕಾರ
ಶಿಕ್ಷಕ ಎಸ್.ಬಸವರಾಜಪ್ಪ ಅನಿಸಿಕೆ ಹಲುವಾಗಲು ಗ್ರಾಮದಲ್ಲಿ ಕಾರ್ಯಕ್ರಮ
ಹರಪನಹಳ್ಳಿ: ಹಲುವಾಗಲು ಗ್ರಾಮದ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ೨೦೦೮ ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಶನಿವಾರ ನಡೆಯಿತು.
ಶಿಕ್ಷಕ ಎಸ್.ಬಸವರಾಜಪ್ಪ ಮಾತನಾಡಿ, ದಶಕಗಳ ಹಿಂದೆ ನಮ್ಮಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಪ್ರಸ್ತುತ ರಾಜ್ಯ-ಹೊರ ರಾಜ್ಯಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ.
ಕೆಲವರು ಉದ್ಯಮ ಹೊಂದಿರುವುದು ಕೂಡ ಅತೀವ ಸಂತಸದ ವಿಷಯವಾಗಿದೆ. ಈ ರೀತಿಯ ಕಾರ್ಯಕ್ರಮಗಳಿಂದ ನಮ್ಮ ವೃತ್ತಿ ಬದುಕಿನ ಸಾರ್ಥಕತೆ ಕಾಣಬಹುದು. ಇಂತಹ ಕಾರ್ಯಕ್ರಮಗಳು ಹೆಚ್ಚಿದಂತೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಬಾಂಧವ್ಯ ವೃದ್ಧಿಸಲಿವೆ. ಕಷ್ಟದಲ್ಲಿರುವ ಸ್ನೇಹಿತರಿಗೆ ಸಹಕಾರ ನೀಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಶಿಕ್ಷಕಿ ಶಕುಂತಲಮ್ಮ ಮಾತನಾಡಿ, ಇಂದಿನ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಇದೆ. ಗುರುಗಳು, ತಂದೆ, ತಾಯಿಗೆ ಗೌರವ ನೀಡುವವರು ಜೀವನದಲ್ಲಿ ಅತ್ಯುನ್ನತ ಸ್ಥಾನ ಪಡೆಯುತ್ತಾರೆ, ದೇಶದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಗೌರವ ಸ್ಥಾನ ಹೊಂದಿದೆ. ಆದ್ದರಿಂದ ನಾವು ನಮ್ಮ ಹಳೆಯ ವಿದ್ಯಾರ್ಥಿಗಳಿಂದ ಗೌರವ ಪಡೆದಿದ್ದೇವೆ ಎಂದರು .