ಸಂಡೂರಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿದ ಅಕ್ಕ ಕೆಫೆಯನ್ನು ಶಾಸಕಿ ಅನ್ನಪೂರ್ಣ ತುಕಾರಾಮ್ ಉದ್ಘಾಟಿಸಿದರು. ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ ಇತರರಿದ್ದರು.
- ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿಕೆ
- ಅಕ್ಕ ಕೆಫೆ ಉದ್ಘಾಟನೆ
ಸಂಡೂರು: ಅಕ್ಕ ಕೆಫೆಯಲ್ಲಿ ಕಡಿಮೆ ಬೆಲೆಗೆ ಊಟ-ತಿಂಡಿ ನೀಡಲಾಗುತ್ತಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.
ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸೋಮವಾರ ಅಕ್ಕ ಕೆಫೆ ಉದ್ಘಾಟಿಸಿ ಮಾತನಾಡಿದರು. ಬಡವರಿಗೆ ಕೈಗೆಟುಕುವ ಧರದಲ್ಲಿ ತಿಂಡಿ, ಮಧ್ಯಾಹ್ನದ ಊಟ ದೊರೆಯಲಿದೆ. ಅಕ್ಕ ಕೆಫೆಯನ್ನು ಸ್ವಸಹಾಯ ಸಂಘದ ಮಹಿಳೆಯರು ನಿರ್ವಹಣೆ ಮಡಲಿದ್ದಾರೆ ಎಂದರು.
ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ, ಡಾ.ಐ.ಆರ್.ಅಕ್ಕಿ, ಸಿಡಿಪಿಒ ಪಿ.ನಾಗರಾಜ, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ್, ತೋಟಗಾರಿಕೆ ಎಡಿ ಹನುಮಪ್ಪ ನಾಯಕ, ಎಇಇ ಪ್ರಕಾಶ್ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ವಿನಯ್ ಕುಮಾರ್ ಗೌಡ, ನರೇಗಾ ಎಡಿ ವಸಂತಕುಮಾರ, ತಾಲೂಕು ಯೋಜನಾಧಿಕಾರಿ ಹನುಮಗೌಡ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ ಇದ್ದರು.