ಅರಸೀಕೆರೆ ಕೋಲಶಾಂತೇಶ್ವರ ಮಠದ ಆವರಣದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಪದಾಧಿಕಾರಿಗಳ ಆಯ್ಕೆ, ಮಠಾಧಿಪತಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕ್ಯಾರಕಟ್ಟೆ ಅಜ್ಜಯ್ಯ ಸ್ವಾಮಿ, ಮುತ್ತಿಗಿ ಶಿವಯೋಗಿ ಅಜ್ಜಯ್ಯ ಹಾಲಸ್ವಾಮಿ, ಬೆಣ್ಣಿಹಳ್ಳಿ ಪಂಚಾಕ್ಷರ ಶಿವಾಚಾರ್ಯರು, ಜಂಗಮ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ ಇತರರಿದ್ದರು.
- ಕಟ್ಟೆಮನೆ ರಾಜ ದೇಶಿಕೇಂದ್ರ ರೇವಣಸಿದ್ದೇಶ್ವರ ಶಿವಾಚಾರ್ಯರು ಸಲಹೆ
- ಮಠಾಧಿಪತಿಗಳಿಗೆ ಗೌರವ ಸಮರ್ಪಣೆ
ಹರಪನಹಳ್ಳಿ: ಜಂಗಮ ಅಸ್ತಿತ್ವಕ್ಕೆ ಚ್ಯುತಿ ಬರದಂತೆ ಸಮುದಾಯದವರು ಘನತೆಯ ಬದುಕು ನಡೆಸಬೇಕು. ಅಧರ್ಮ, ಜಾತಿ ವ್ಯವಸ್ಥೆಯನ್ನು ಶರಣರು ತೊಡೆದು ಹಾಕಿದ ಕ್ರಮ ಅನುಸರಿಸಬೇಕು ಎಂದು ರಾಮಘಟ್ಟ ಪುರವರ್ಗ ಮಠದ ಕಟ್ಟೆಮನೆ ರಾಜ ದೇಶಿಕೇಂದ್ರ ರೇವಣಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.
ಕೋಲಶಾಂತೇಶ್ವರ ಮಠದ ಆವರಣದಲ್ಲಿ ತಾಲೂಕು ಜಂಗಮ ಸಮಾಜ ಸೇವಾ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಪದಾಧಿಕಾರಿಗಳ ಆಯ್ಕೆ, ಮಠಾಧಿಪತಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರಸೀಕೆರೆ ಕೋಲಶಾಂತೇಶ್ವರ ಮಠದ ಶಂತಲಿಂಗ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಬಡತನದಲ್ಲೇ ಜೀವನ ಕಳೆದ ಜಂಗಮರು ಆಚಾರ- ವಿಚಾರಗಳಿಂದ ಈಚೆಗೆ ಸಾಮಾಜಿಕ ಪ್ರಗತಿ ಹೊಂದುತ್ತಿದ್ದಾರೆ ಎಂದರು.
ಹರಪನಹಳ್ಳಿ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಮಾತನಾಡಿ, ಜಂಗಮ ಸಮಾಜದ ಸಂಘಟನೆಯತ್ತ ಸಾಗಿ ಸಾಮಾಜಿಕ ಬದಲಾವಣೆ ಕಾಣಬೇಕು. ಧರ್ಮದ ಆಚಾರ ತತ್ವ ಸಾರಲು ಸಂಘಟನೆಯ ಅಗತ್ಯವಿದೆ ಎಂದು ತಿಳಿಸಿದರು. ಹರಪನಹಳ್ಳಿಯ ಸಣ್ಣಹಾಲಸ್ವಾಮೀಜಿ ಜಂಗಮ ಸಮಾಜದ ವಿದ್ಯಾರ್ಥಿಗಳ ಭವಿಷ್ಯಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದರು.
ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ, ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಎಸ್.ಎಂ.ಕಾಶಿನಾಥಯ್ಯ, ತಾಲೂಕು ಅಧ್ಯಕ್ಷ ಕೆ.ಎಂ.ಶಿವಕುಮಾರ ಸ್ವಾಮಿ, ನಿವೃತ್ತ ಉಪನ್ಯಾಸಕ ಶಾಮತವೀರಯ್ಯ, ಪ್ರಮುಖರಾದ ಎಚ್.ಎಂ.ಜಗದೀಶ್, ಮಲ್ಲಿಕಾರ್ಜುನ, ಕೆ.ಎಂ.ಮಂಜುನಾಥಯ್ಯ, ಕೆ.ಎಂ.ವಿಶ್ವನಾಥಯ್ಯ, ಎಂ.ಎಂ.ರುದ್ರಯ್ಯ, ವೀರಭದ್ಯಯ್ಯ, ಶ್ವೇತಾ ರವೀಂದ್ರನಾಥ, ಚನ್ನಮಲ್ಲಯ್ಯ, ಬಸವರಾಜ್, ಹುಲಿಕಟ್ಟಿ ಮಲ್ಲಿಕಾರ್ಜುನ ಇತರರಿದ್ದರು.