ಕಂಚೀಕೆರೆಯಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು. ಕೆಪಿಸಿಸಿ ವಕ್ತಾರ ಡಿ ಬಸವರಾಜ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ ಡಿ ಅಣ್ಣಪ್ಪ, ನಿವೃತ್ತ ಪ್ರಾಚಾರ್ಯ ಮನೋಹರ, ಗುತ್ತಿಗೆದಾರ ಚಿದಾನಂದ ಇತರರಿದ್ದರು. 
ಬಳ್ಳಾರಿ

ಮದುವೆಗೆ ಬಂಗಾರದಂತಹ ಮನಸ್ಸು ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಆಶೀರ್ವಚನ
ಹರಪನಹಳ್ಳಿ: ಬಸವಾದಿ ಶರಣರು ಹಾಕಿಕೊಟ್ಟ ಸಾಮೂಹಿಕ ವಿವಾಹ ಸಂಪ್ರದಾಯ ನಿರಂತರ ಸಾಗಬೇಕು ಎಂದು ಶಿರಹಟ್ಟಿ-ಬಾಳೆಹೊಸೂರು ಭಾವೈಕ್ಯತಾ ಸಂಸ್ಥಾನದ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಕಂಚೀಕೆರೆ ಕೋಡಿ ಸಿದ್ದೇಶ್ವರ ಮಠದಲ್ಲಿ ಲಿಂಗೈಕ್ಯ ಬಿದ್ರಿ ರೇವಣಸಿದ್ದಪ್ಪ ನೆನಪಿಗಾಗಿ ಭಾನುವಾರ ಆಯೋಜಿಸಿದ್ದ 26ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮದುವೆ ಎನ್ನುವುದು ಮಮಕಾರದಿಂದ ದುಡಿಮೆ ಮತ್ತು ವ್ಯವಹಾರ ಮಾಡುವುದಾಗಿದೆ. ಇದನ್ನು ಅರಿತು ದಂಪತಿಗಳು ಮಾದರಿಯಾಗಬೇಕು. ಮದುವೆಗೆ ಬಂಗಾರ ಶ್ರೇಷ್ಠವಲ್ಲ, ಬದಲಾಗಿ ಬಂಗಾರದಂತಹ ಮನಸ್ಸು ಬೇಕಿದೆ. ಸಂಪತ್ತು ಇರುವವರಿಗಿಂತ ಆದರ್ಶವಂತರನ್ನು ಮದುವೆಯಾಗಬೇಕು. ಸುಖ ಜೀವನ ನಡೆಸುವ ಮೂಲಕ ಪಡೆಯುವ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ವರದಕ್ಷಿಣೆ ಸಾಮಾಜಿಕ ಪಿಡುಗಾಗಿದ್ದು, ಅದನ್ನು ಪಡೆಯುವುದನ್ನು ಬಿಟ್ಟು ತಿರಸ್ಕರಿಸುವ ಗುಣ ಬೆಳೆಸಿಕೊಳ್ಳಬೇಕು. ಅನಾರೋಗ್ಯ, ಚಟ ಹೊಂದಿದವರು ಹಾಗೂ ದುಡಿಮೆ ಇಲ್ಲದವರು ಮದುವೆಯನ್ನು ತ್ಯಜಿಸುವುದು ಉತ್ತಮ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ. ಡಿ. ಅಣ್ಣಪ್ಪ ಮಾತನಾಡಿ, ಉಚಿತ ಸಾಮೂಹಿಕ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಆರ್ಥಿಕ ಸದೃಢ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಬೇಕು. ನವಜೋಡಿಯು ಹೊಂದಾಣಿಕೆ ಜೀವನ ನಡೆಸುವ ಮೂಲಕ ಮಾದರಿಯಾಗಬೇಕು ಎಂದರು. ಪ್ರಮುಖರಾದ ಸುರಭಿ, ಮೈತ್ರಿ, ಲೋಕೇಶ, ಬಿ ಚಂದ್ರಪ್ಪ, ಶಾಂತಕುಮಾರ್ ರೆಡ್ಡಿ, ಮೀನಾಕ್ಷಮ್ಮ, ಅನುರಾಧ ಕೊಟ್ರೇಶ, ಸುನೀಲ್ ಕುಮಾರ, ಡಾ. ಅನಿಲ್ ಕುಮಾರ, ರಾಜೇಶ್ವರಿ, ಉಷಾ, ಮಂಜುನಾಥ, ನಾಗರಾಜ್, ವೆಂಕಟೇಶ್ ಇತರರಿದ್ದರು.