ಕಾನಹೊಸಹಳ್ಳಿ ಗ್ರಾಮದ ಶಕ್ತಿದೇವತೆ ಶ್ರೀ ಮಾರಿಕಾಂಬಾ ದೇವಿ ಜಾತ್ರೋತ್ಸವದ ನಿಮಿತ್ತ ತೇರುಗಡ್ಡೆಯನ್ನು ಮಂಗಳವಾರ ಹೊರಗೆ ತೆಗೆಯಲಾಯಿತು.
- ಕಾನಹೊಸಹಳ್ಳಿ ಫೆ. 26ರಂದು ರಥೋತ್ಸವ
- ತೇರು ಗಡ್ಡೆ ತೊಳೆದು ಪೂಜೆ ಸಲ್ಲಿಕೆ
ರಥೋತ್ಸವದ ಪ್ರಥಮ ಮಂಗಳ ಕಾರ್ಯವಾಗಿ ಸೋಮವಾರ ರಾತ್ರಿ 46 ಪಡುಗಗಳಲ್ಲಿ 281 ಸೇರು ಹುಳ್ಳಿಯನ್ನು ಹಾಕಿ ಬೆರಣಿಯಿಂದ ಬೇಯಿಸಿ ಗುಗ್ಗರಿ ತಯಾರಿಸಲಾಯಿತು. ಬೆಳಗ್ಗೆ ಗುಗ್ಗರಿ ಪೂಜೆ ನೆರವೇರಿಸಿ ಭಕ್ತರಿಗೆ ವಿತರಿಸಲಾಯಿತು.
ನಂತರ ತೇರಿನ ಮನೆಬಾಗಿಲು ತೆರೆದು ಉರುಮೆ, ಮೇಳ, ಹಲಗೆ ಸೇರಿ ವಿವಿಧ ವಾದ್ಯಗಳು ಹಾಗೂ ಜಯಘೋಷಗಳೊಂದಿಗೆ ತೇರು ಗಡ್ಡೆಯನ್ನು ಎಳೆದು ತಂದು ತೇರು ಬೀದಿಯಲ್ಲಿ ನಿಲ್ಲಿಸಲಾಯಿತು. ಬಳಿಕ ತೇರು ಗಡ್ಡೆ ತೊಳೆದು ಪೂಜೆ ಸಲ್ಲಿಸಲಾಯಿತು. ಗ್ರಾಮದ ದೈವಸ್ಥರು, ಗ್ರಾಮಸ್ಥರು, ಭಕ್ತರು ಪಾಲ್ಗೊಂಡಿದ್ದರು. ಫೆ.10ರಂದು ಕೋಟೆ ಏಣಿ ಕಾರ್ಯ ನಡೆಯಲಿದೆ.