ಕಾನಹೊಸಹಳ್ಳಿ ಸಮೀಪದ ಕುರಿಹಟ್ಟಿ ಗ್ರಾಮದ ಹತ್ತಿರದ ತುಮಲುನಲ್ಲಿ ಶ್ರೀ ಮಾರಿಕಾಂಬಾ ದೇವಿ ಮೂರ್ತಿ ಮೆರವಣಿಗೆ ಮಾಡಲಾಯಿತು. 
ಬಳ್ಳಾರಿ

ಮಾರಿಕಾಂಬಾ ದೇವಿ ಜಾತ್ರೋತ್ಸವ ಅದ್ದೂರಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಮಾರಿಕಾಂಬಾ ದೇವಿ
  • ಹರಕೆ

ಮಾರಿಕಾಂಬಾ ದೇವಿ ಜಾತ್ರೋತ್ಸವ ಅದ್ದೂರಿ

ಕಾನಹೊಸಹಳ್ಳಿ: ಬುಡಕಟ್ಟು ಸಮುದಾಯದ ಜನರ ಆರಾಧ್ಯದೈವ ಕುರಿಹಟ್ಟಿ ಗ್ರಾಮದ ಶಕ್ತಿದೇವತೆ ಶ್ರೀ ಮಾರಿಕಾಂಬಾ ದೇವಿ ಜಾತ್ರೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.
ಜನಪದ ವಾದ್ಯಮೇಳದೊಂದಿಗೆ ಮಾರಿಕಾಂಬಾ ದೇವಿ ಮೂರ್ತಿ ಮೆರವಣಿಗೆ ಮೂಲಕ ಕುರಿಹಟ್ಟಿ ಗ್ರಾಮದ ಬಳಿಯ ತುಮಲು ಪ್ರದೇಶಕ್ಕೆ ತೆರಳಿ ಜಗುಲಿ ಮೇಲೆ ದೇವಿ ಮೂರ್ತಿ ಪ್ರತಿಸ್ಠಾಪಿಸಲಾಯಿತು. ಸುತ್ತಲಿನ ಹಳ್ಳಿಗಳಿಂದ ಬಂದಿದ್ದ ಜಾನುವಾರುಗಳನ್ನು ದೇವಿ ಸುತ್ತಲು ಮೂರು ಸುತ್ತು ಸುತ್ತಿಸಿ ಹರಕೆ ಪೂರೈಸಿದರು. ಭಕ್ತರು ದೇವಿಯ ಜಗಲಿ ಮುಂದೆ ಅಗ್ನಿಕುಂಡ ಹಾಯ್ದು ಭಕ್ತಿ ಅರ್ಪಿಸಿದರು.
ಸಂಜೆ ದೇವಿ ಮೂರ್ತಿಯನ್ನು ಮೆರವಣಿಗೆ ಮೂಲಕ ಗ್ರಾಮಕ್ಕೆ ಕೆರೆತರಲಾಯಿತು. ಜಾತ್ರೆಗೆ ಸುತ್ತಲಿನ ಗ್ರಾಮಸ್ಥರು ಅಗಮಿಸಿದ್ದರು. ಕೊಟ್ಟೂರು ಸಿಪಿಐ ದುರುಗಪ್ಪ, ಕಾನಹೊಸಹಳ್ಳಿ ಪಿಎಸ್‌ಐ ಸಿದ್ರಾಮ ಬಿದರಾಣಿ ನೇತೃತ್ವದಲ್ಲಿ ಸೂಕ್ತ ಬಂದೊಬೋಸ್ತ್ ಒದಗಿಸಲಾಗಿತ್ತು.
ಮೇಳೈಸಿದ ಜನಪದ ಕಲೆ: ಜಾತ್ರೆಯಲ್ಲಿ ಚಿಕ್ಕಜೋಗಿಹಳ್ಳಿ ತಾಂಡದ ಬಂಜಾರ ಮಹಿಳೆಯರ ಲಂಬಾಣಿ ನೃತ್ಯ ಮತ್ತು ಸ್ಥಳಿಯ ಕಲಾವಿದರಿಂದ ನಂದಿಕೊಲು, ಕೋಲಾಟ ನೃತ್ಯ ಪ್ರದರ್ಶಿಸಲಾಯಿತು.