ರೈಲು ನಿಲ್ದಾಣದಲ್ಲಿ 20 ಲಕ್ಷ ರೂ. ಮೌಲ್ಯದ ಗಾಂಜಾ ಪತ್ತೆ 
ಬಳ್ಳಾರಿ

ರೈಲು ನಿಲ್ದಾಣದಲ್ಲಿ 20 ಲಕ್ಷ ರೂ. ಮೌಲ್ಯದ ಗಾಂಜಾ ಪತ್ತೆ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿ
ಬಳ್ಳಾರಿ : ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆ( ಆರ್‌ಪಿಎಫ್) ಅಧಿಕಾರಿಗಳು 20 ಲಕ್ಷ ರೂ. ಮೌಲ್ಯದ 40.495 ಕೆ.ಜಿ. ಗಾಂಜಾ ವಶಪಡಿಸಿಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬಳ್ಳಾರಿ ರೈಲು ನಿಲ್ದಾಣದ ಮೂಲಕ ಸಾಗುತ್ತಿದ್ದ ಶಾಲಿಮಾರ್ ವಿಶಾಖಪಟ್ಟಣಂ ಎಕ್ಸ್‌ಪ್ರೆಸ್ ರೈಲನ್ನು ಅಧಿಕಾರಿಗಳು ಪರಿಶೀಲಿಸಲಾಯಿತು. ಸಾಮಾನ್ಯ ಭೋಗಿಯಲ್ಲಿ ವಾರಸುದಾರರಿಲ್ಲದ ಮೂರು ಪಾಲಿಥಿನ್ ಚೀಲಗಳು ಪತ್ತೆಯಾಗಿದ್ದವು. ಪ್ರಯಾಣಿಕರನ್ನು ವಿಚಾರಿಸಿದರೂ ಅವು ಯಾರದ್ದೆಂದು ಯಾರು ಮಾಹಿತಿ ನೀಡಲಿಲ್ಲ. ಆ ಬಳಿಕ ಚೀಲಗಳನ್ನು ರೈಲಿನಿಂದ ಇಳಿಸಿ ಪರಿಶೀಲಿಸಿದಾಗ ಗಾಂಜಾ ಇರುವುದು ದೃಢಪಟ್ಟಿದೆ. ಸದ್ಯ, ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
====