ಜೈಲಿನ ಆವರಣದ ಚೆಂಡಿನಲ್ಲಿ ಗಾಂಜಾ ಪತ್ತೆ 
ಬಳ್ಳಾರಿ

ಜೈಲಿನ ಆವರಣದ ಚೆಂಡಿನಲ್ಲಿ ಗಾಂಜಾ ಪತ್ತೆ

ಪ್ರಮುಖ ಮುಖ್ಯಾಂಶಗಳು

  • ಚೆಂಡು
  • ಸಿಬ್ಬಂದಿ
  • ಕ್ಯಾಮೆರಾ
ಬಳ್ಳಾರಿ : ಇಲ್ಲಿನ ಕೇಂದ್ರ ಕಾರಾಗೃಹದ ಅವರಣಕ್ಕೆ ಚೆಂಡಿನಲ್ಲಿ ಗಾಂಜಾ ಇರಿಸಿ ಎಸೆದ ಸಂಬಂಧಿಸಿದಂತೆ ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.16ರಂದು ಜೈಲಿನ ಆವರಣದ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಗೋಡೆ ಪಕ್ಕದಲ್ಲಿ ಚೆಂಡು ಬಿದ್ದಿದ್ದು ಪತ್ತೆಯಾಗಿದೆ. ಚೆಂಡು ದೊರೆತ ಸ್ಥಳ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಅಪರಿಚಿತಯೊಬ್ಬ ಆವರಣಕ್ಕೆ ಚೆಂಡು ಎಸೆದಿರುವುದು ಕಂಡು ಬಂದಿದೆ. ಹೊರಗಡೆಯಿಂದ ಚೆಂಡು ತೂರಿದ್ದ ಜಾಗ ಪರಿಶೀಲಿಸಿದ ವೇಳೆ ಮತ್ತೊಂದು ಚೆಂಡು ಪತ್ತೆಯಾಗಿದೆ. ಎರಡು ಚೆಂಡುಗಳಲ್ಲಿ ಗಾಂಜಾ ರೀತಿಯ ವಸ್ತು ಪತ್ತೆಯಾಗಿರುವುದು ಕಂಡು ಬಂದಿದೆ.
==