ಬಳ್ಳಾರಿಯ ಡಿಸಿ ಕಚೇರಿ ಮುಂಭಾಗದಲ್ಲಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಸಫಾಯಿ ಕರ್ಮಚಾರಿ ಕಾವಲು ಸಮಿತಿಯಿಂದ ಡಿಸಿ ಕೆ.ನಾಗೇಂದ್ರ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಪದಾಧಿಕಾರಿಗಳಾದ ಆರ್.ವಿ.ಚಂದ್ರಶೇಖರ್, ಡಾ.ಕೆ.ಬಿ. ಓಬಳೇಶ, ಎಂ.ಪದ್ಮ, ಕಂದಕೂರು ರಾಮುಡು, ಅಕ್ಷಯ್ ಕುಮಾರ್, ರಾಜಶೇಖರ್, ಯಲ್ಲಪ್ಪ , ಹನುಮಯ್ಯ ಇದ್ದರು. 
ಬಳ್ಳಾರಿ

ಮಲಸ್ವಚ್ಛತೆ ಕಾನೂನು ಬಾಹಿರ

ಪ್ರಮುಖ ಮುಖ್ಯಾಂಶಗಳು

  • ಸಫಾಯಿ ಕರ್ಮಚಾರಿ ಕಾವಲು ಸಮಿತಿ ಮನವಿ

ಬಳ್ಳಾರಿ :

ಮಲ ಹೊರುವ ಪದ್ದತಿ ನಿರ್ಮೂಲನೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಸಫಾಯಿ ಕರ್ಮಚಾರಿ ಕಾವಲು ಸಮಿತಿಯಿಂದ ಪ್ರತಿಭಟನೆ ನಡೆಯಿತು.

ಸೇಫ್ಟಿ ಟ್ಯಾಂಕ್, ಒಳಚರಂಡಿ, ರ‌್ಯೆಲು ನಿಲ್ದಾಣ , ಆಸ್ಪತ್ರೆ, ಸಾರ್ವಜನಿಕ ಸ್ಥಳದಲ್ಲಿ ಕಾರ್ಮಿಕರನ್ನು ಭದ್ರತೆಯಿಲ್ಲದೆ ಮಲ ಸ್ವಚ್ಚತೆ ಕೆಲಸ ಮಾಡಿಸುವುದು ಕಾನೂನು ಬಾಹಿರವಾಗಿದೆ. ಸಫಾಯಿ ಕರ್ಮಚಾರಿ ಕೆಲಸದ ವೇಳೆ ಮೃತಪಟ್ಟರೆ ಸುಪ್ರಿಂ ಆದೇಶದಂತೆ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಬೇಕು. ಪರಿಶಿಷ್ಟ ಜಾತಿಗೆ ಸೇರಿದ್ದರೆ ಅನ್ವಯಿಸುವ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಆರೋಗ್ಯ ವಿಮೆ, ಆರೋಗ್ಯ ಕಾರ್ಡ್, ಚಿಕಿತ್ಸಾ ಸೌಲಭ್ಯ, ಮಾಸಿಕ ಪಿಂಚಣಿ ಜತೆಗೆ ಮಕ್ಕಳಿಗೆ ವಸತಿ, ಶಿಕ್ಷಣ ಉನ್ನತ ಶಿಕ್ಷಣ ಮೂಲಕ ಸಮುದಾಯ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಬೇಕು. ರಾಜ್ಯಾದ್ಯಂತ ಪಾರದರ್ಶಕ ಸಮೀಕ್ಷೆ ನಡೆಸಬೇಕು. ಸ್ವಯಂ ಘೋಷಣೆ ಮೂಲಕ ಯಾವುದೇ ಕುಟುಂಬ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಅಭಿವೃದ್ಧಿ ನಿಗಮಕ್ಕೆ ಅಗತ್ಯವಿರುವಷ್ಟು ಹಣಕಾಸು ಒದಗಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
==